ಮುಂಬೈ ಡಿ 22: ಕಾನೂನು ಚೆನ್ನಾಗಿ ಅರಿದು ಕುಡಿದ ವಕೀಲನೊಬ್ಬ ತನ್ನ ಮಗಳ ವಯಸ್ಸಿನ ಅಪ್ರಾಪ್ತೆಯನ್ನು ಮದುವೆಯಾಗಿ ಇದೀಗ ಪೊಲೀಸರ ವಶವಾಗಿದ್ದಾನೆ. ಇತನ ವಿರುದ್ದ ಬಾಲ್ಯ ವಿವಾಹ ಹಾಗೂ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಹೈಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ವಕೀಲರೊಬ್ಬರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು ತನ್ನ ಮಗಳಷ್ಟೇ ಪ್ರಾಯದ ಬಾಲಕಿಯನ್ನು 2015ರಲ್ಲಿ ಮದುವೆಯಾಗಿರುವುದಾಗಿ ವರದಿ ತಿಳಿಸಿದೆ. ಈತನಿಗೆ ಈಗಾಗಲೇ ೧೫ ವರ್ಷದ ಮಗಳಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ತೀವ್ರ ವಿರೋಧದ ನಡುವೆಯೂ ಆಕೆಯ ಅಜ್ಜ, ಅಜ್ಜಿ 53ವರ್ಷದ ವಕೀಲನ ಜತೆ ಮದುವೆ ಮಾಡಿಸಿದ್ದರು. ಅಷ್ಟೇ ಅಲ್ಲ ಆಕೆಯ ವಿರೋಧದ ನಡುವೆಯೂ ಬಾಲಕಿಗೆ ಲೈಂಗಿಕವಾಗಿ ಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾಳೆ.ಇನ್ನು ಇತನನ್ನು
ಕಳೆದ ವಾರ ಪೊಲೀಸರು ವಕೀಲರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ವಿಶೇಷ ಕೋರ್ಟ್ ಡಿ 21 ಗುರುವಾರ ವಕೀಲನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿತ್ತು. ಬಾಲಕಿಯ ಅಜ್ಜ, ಅಜ್ಜಿಯೇ ಬಲವಂತವಾಗಿ ಮದುವೆ ಮಾಡಿಸಿದ್ದು, ಅವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ವಕೀಲರ ಮೊದಲ ಪತ್ನಿ 2014ರಲ್ಲಿ ಸಾವನ್ನಪ್ಪಿದ್ದ ಬಳಿಕ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗಿದ್ದರು ಎನ್ನಲಾಗಿದೆ.