ಮೈಸೂರು ಡಿ 22 : ಸೆಕ್ಸ್ ಸ್ಕ್ಯಾಂಡಲ್ ಮತ್ತು ಸ್ಯಾಂಡಲ್ ವುಡ್ ಅಂದರೆ ಅದ್ಯಾಕೋ ಬಿಡಲಾರಾದ ನಂಟು..ಹಲವು ಆರೋಪಗಳು ಪ್ರತ್ಯಾರೋಪಗಳು ಕೇಳಿ ಬರ್ತಾ ಇರುತ್ತೆ ಇದಕ್ಕೆ ಸದ್ಯ ಹೊಸ ಸೇರ್ಪಡೆ ಕನ್ನಡದ ಹಾಸ್ಯ ನಟರಾದ ಸಾಧುಕೋಕಿಲಾ ಮತ್ತು ಮಂಡ್ಯ ರಮೇಶ್. ಮೈಸೂರು ಮಸಾಜ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಇವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು ರಕ್ಷಿಸಿ, ಸ್ಪಾ ಮಾಲೀಕ ರಾಜೇಶ್ ನನ್ನು ಬಂಧಿಸಿದ್ದರು. ಇದೇ ವೇಳೆ ಹಾಸ್ಯ ನಟರಾದ ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್ ಸಹ ಈ ಕೇಂದ್ರಕ್ಕೆ ಆಗಮಿಸಿದಾಗ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಯುವತಿ ಆರೋಪಿಸಿ ಈಗ ದೂರು ನೀಡಿದ್ದಾಳೆ. ಬಾಡಿ ಮಸಾಜ್ ಹೆಸರಲ್ಲಿ ಸಾಧು ಕೋಕಿಲಾ, ಮಂಡ್ಯ ರಮೇಶ್ ಬಂದು ಕಿರುಕುಳ ನೀಡಿದ್ದಾರೆ. ಮಸಾಜ್ ಪಾರ್ಲರ್ ಗೆ ಎರಡು ಬಾರಿ ಭೇಟಿ ನೀಡಿದ್ದಾರೆ.ಆದ್ರೆ ಈ ಬಗ್ಗೆ ಮಾಲೀಕರಿಗೆ ದೂರು ನೀಡಿದ್ರೆ ಸಹಕರಿಸು ಎನ್ನುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ. ಬ್ಯೂಟಿ ಪಾರ್ಲರ್ ಕೆಲಸ ಎಂದು ಹೇಳಿ ಕರೆತಂದು ಮಸಾಜ್ ಮಾಡಲು ಒತ್ತಾಯಿಸುತ್ತಿದ್ದರು. ನೊಂದ ಯುವತಿ ಈ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಗೆ ಪತ್ರದ ಮೂಲಕ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು. ಪತ್ರದ ಮಾಹಿತಿ ಪಡೆದ ಒಡನಾಡಿ ಸಂಸ್ಥೆ ಸರಸ್ವತಿಪುರಂ ಠಾಣೆಯ ಪೊಲೀಸರು ಹಾಗೂ ಮಹಿಳಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಯುವತಿಯನ್ನ ರಕ್ಷಿಸಲಾಗಿದೆ.
ಸ್ಪಾ ಮಾಲೀಕ ರಾಜೇಶ್