ಸುಳ್ಯ, ಆ 22 (Daijiworld News/MSP): ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಸುಳ್ಯ ಬಿಜೆಪಿ ತುರ್ತು ಸಭೆ ನಡೆಸಿದೆ, ಈ ಸಂದರ್ಭ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ಮುಖಂಡರು ಚರ್ಚಿಸಿದರು. ಈ ಸಂದರ್ಭ ಸುಮಾರು 70 ಕ್ಕೂ ಅಧಿಕ ಚುನಾಯಿತ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಸಮಿತಿ ಕೈಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಸುಳ್ಯ ಬಿಜೆಪಿಯಿಂದ ಅಸಹಕಾರ ಧೋರಣೆ ಮಾಡಲು ಯೋಚಿಸಲಾಯಿತು.
ಇದಕ್ಕೂ ಮುನ್ನ ಸಭೆಯ ಸಂದರ್ಭ ಪತ್ರಕರ್ತರನ್ನು ತಡೆದ ಕಾರ್ಯಕರ್ತರು, ನಿಮಗೆ ಪ್ರವೇಶವಿಲ್ಲ ಎಂದು ಹೇಳಿದಾಗ ನಿಷೇದ ಇದ್ದರೆ ಮೊದಲೇ ಮಾಹಿತಿ ನೋಡಬೇಕಿತ್ತು ಎಂದು ಬಿ.ಜೆ.ಪಿ ನಾಯಕರನ್ನು ಪ್ರಶ್ನಿಸಿದಾಗ ಬಳಿಕ ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಸುಭೋದ್ ಶೆಟ್ಟಿ ಮೇನಾಲ, ಹರೀಶ್ ಕಂಜಿಪಿಲಿ, ದಿನೇಶ್ ಮೆದು, ಚಂದ್ರಶೇಖರ ಪನ್ನೆ, ಮುಳಿಯ ಕೇಶವ ಭಟ್, ಪಿ.ಕೆ. ಉಮೇಶ್, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ಮೇನಾಲ, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.