ಮಂಗಳೂರು, ಆ 23 (Daijiworld News/MSP): ತುಳುನಾಡ ರಕ್ಷಣಾ ವೇದಿಕೆ (ರಿ) ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂ. ಸಹಭಾಗಿತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಕಲಾ ಪ್ರಕಾರದೊಂದಿಗೆ ಪ್ರತಿಭೆ ಗುರುತಿಸಿ ಅವರಿಗೆ ಗೌರವನ್ನು ನೀಡುವ ಉದ್ದೇಶದಿಂದ ಆ.23 ರಂದು ಕದ್ರಿ ಬಾಲಭವನ ದಲ್ಲಿ ಚಿತ್ರ ಕಲಾ ಮತ್ತು ಮುದ್ದು ಕ್ರಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ ಉದ್ಘಾಟನೆಯನ್ನು ವಿದೂಷಿ ಸೌಮ್ಯ ಸುಧೀಂದ್ರ ರಾವ್ ನೆರವೇರಿಸಿ ಛದ್ಮ ವೇಷ ಸ್ಪರ್ಧೆಗೆ ಚಾಲನೆ ನೀಡಿದರು.
ಈ ವೇಳೆ ಸ್ವರ್ಣ ಸುಂದರ್ ಅವರು ಮಕ್ಕಳಿಗೆ ಡ್ರಾಯಿಂಗ್ ಹಾಳೆ ವಿತರಿಸುವ ಮೂಲಕ ಚಿತ್ರ ಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದರು. ಮುಖ್ಯ ಅಥಿತಿಗಳಾಗಿ ಮ್ಯಾಕ್ಸ್ ಲ್ಯಾಪ್ ಇನ್ಶುರೆನ್ಸ್ ಕಂಪನಿಯ ಕಛೇರಿ ಮುಖ್ಯಸ್ಥರಾದ ನಾಣಯ್ಯ .ನೊಬಟ್ರ್ ಮಿರಾಂಡಾ, ಸ್ವಾತಿ ಕುಲಾಲ್, ಮಹೇಶ್ ಭಾಗವಹಿಸಿದರು.
ಸಂಜೆ ಸಮಾರೋಪ ಸಮಾರಂಭ ನಡೆದು ಬಹುಮಾನ ವಿತರಣೆಯನ್ನು ಶ್ರೀ ಹರಿಕೃಷ್ಣ ಪುನರೂರು ಮಾಡಿದರು.ಮುಖ್ಯ ಅತಿಥಿಗಳಾಗಿ ಜೋತಿ ಜೈನ್, ಜೆ.ಇಬ್ರಾಹಿಂ, ಭಾಗವಹಿಸಿದರು. ಸ್ಪರ್ಧೆಯು ಒಂದನೇ ತರಗತಿಯಿಂದ 7ನೇಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಏಳು ವಿಭಾಗಗಳಲ್ಲಿ ಪ್ರತೇಕ ವಾಗಿ ನಡೆದಿತ್ತು . ಪ್ರತಿ ವಿಭಾಗದ ಲ್ಲಿ ಪ್ರಥಮ, ದ್ವಿತೀಯ, ತ್ರತೀಯ , ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು ಕಾರ್ಯಕ್ರಮ ಆಶೀಶ್ ಅಂಚನ್ ಸ್ವಾಗತಿಸಿದರು. ನಿರೂಪಣೆ ಯನ್ನು ಜೋತಿ ಎಡಪದವು ಮಾಡಿದರು. ಪ್ರತೀಮಾ ಅತ್ತಾವರ್ ಧನ್ಯವಾದ ಸಲ್ಲಿಸಿದರು.