ಸುಳ್ಯ, ಆ 23 (Daijiworld News/MSP): ರಾಜ್ಯ ಬಿ.ಜೆ.ಪಿ ಸರಕಾರದಲ್ಲಿ ಸಚಿವ ಸ್ಥಾನ ನಿಗದಿಯಾಗಿದ್ದ ಸುಳ್ಯದ ಶಾಸಕ ಅಂಗಾರ ಅವರಿಗೆ ಕೊನೆ ಹಂತದಲ್ಲಿ ಸಚಿವ ಸ್ಥಾನ ಕೈ ತಪ್ಪಿ ಹೋಗಿರುವ ಹಿನ್ನಲೆಯಲ್ಲಿ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆಯ ಬೇಡಿಕೆ ಬಂದಿದ್ದು ಅದನ್ನು ಶಾಸಕರು ನಿರಾಕರಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶಾಸಕ ಅಂಗಾರ ಅವರು ಭೇಟಿಯಾದ ಸಂದರ್ಭದಲ್ಲಿ ಅವರು ಈ ಆಫರ್ ನೀಡಿದ್ದರು. ಆದರೆ ಇದಕ್ಕೆ ಅಂಗಾರರು, " ನನಗೆ ಇದು ಯಾವುದು ಬೇಡ, ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಅಂಗಾರರು ಅವರ ಸುಳ್ಯದ ದಾಸನಕಜೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಘ ಪರಿವಾರದ ನಾ.ಸೀತರಾಮ ಹಾಗೂ ಚಂದ್ರಶೇಖರ ತಳೂರು ಅವರು ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.