ಬೆಂಗಳೂರು, ಡಿ 23: ತಾಕತ್ತಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ ನೋಡೋಣ ಎಂದು ಸಿಎಂಗೆ ಸಂಸದೆ ಶೋಭಾ ಕರಂದ್ಲಾಜೆ ನೇರ ಸವಾಲು ಹಾಕಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತ ಟ್ವೀಟ್ ಮಾಡಿದ್ದ ಆರೋಪ ಸಂಬಂಧ ಸರ್ಕಾರದ ಪರವಾಗಿ ಹೊನ್ನಾವರದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ನಾನು ಧರ್ಮದ ಬಗ್ಗೆ ಟ್ವೀಟ್ ಮಾಡಿಲ್ಲ. ಕರ್ನಾಟಕದ ಜಿಹಾದಿಗಳ ಬಗ್ಗೆ ಟ್ವೀಟ್ ಮಾಡಿದ್ದೇನೆ. ಜಿಹಾದಿಗಳು ರಾಜ್ಯದಲ್ಲಿ ಇರುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಸೃಷ್ಟಿಸಲು ಈ ರೀತಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಜಿಹಾದಿಗಳು ಇರೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ತಾಕತ್ತಿದ್ದರೆ ನಿಮ್ಮ ಪೊಲೀಸರು ನನ್ನನ್ನ ಬಂಧಿಸಲಿ ನೋಡೋಣ ಎಂದು ನೇರ ಸವಾಲು ಹಾಕಿದ್ದಾರೆ.