ಕಾಸರಗೋಡು ಡಿ 24 : ಬೇಕಲ ಮುದಿಯಕ್ಕಾಲ್ ನಲ್ಲಿ ಎರಡು ಮನೆಗಳಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳವು ಗೈದ ಘಟನೆ ಡಿ 22 ರ ಶುಕ್ರವಾರ ರಾತ್ರಿ ನಡೆದಿದೆ. ಮರ್ಚ೦ಟ್ಸ್ ನೇವಿ ಸುನಿಲ್ ಕುಮಾರ್ ಮತ್ತು ಗಲ್ಫ್ ಉದ್ಯೋಗಿ ಪ್ರಭಾಕರನ್ ಎಂಬವರ ಮನೆಗೆ ನುಗ್ಗಿ ಕಳವು ನಡೆಸಲಾಗಿದೆ.ಸುನಿಲ್ ಕುಮಾರ್ ರವರ ಮನೆಯಿಂದ 25 ಪವನ್ ಚಿನ್ನಾಭರಣ , 10 ಸಾವಿರ ರೂ . ನಗದು ಮತ್ತು 3500 ಡಾಲರ್ ಕಳವು ಮಾಡಲಾಗಿದೆ.ಮನೆಯಲ್ಲಿದ್ದ ಸಿ ಸಿ ಟಿ ವಿ ಯ ಹಾರ್ಡ್ ಡಿಸ್ಕನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.ನಾಲ್ಕು ದಿನಗಳ ಹಿಂದೆಯಷ್ಟೇ ಸುನಿಲ್ ಕುಮಾರ್ ರಜೆಯಲ್ಲಿ ಊರಿಗೆ ಬಂದಿದ್ದರು. ಮಂಗಳೂರಿನಲ್ಲಿ ಕಲಿಯುತ್ತಿರುವ ಪತ್ನಿಯನ್ನು ಕರೆತರಲು ಶುಕ್ರವಾರ ಬೆಳಿಗ್ಗೆ ಸುನಿಲ್ ಕುಮಾರ್ ತೆರಳಿದ್ದರು. ರಾತ್ರಿ 11 ಗಂಟೆಗೆ ಮನೆಗೆ ತಲಪಿದಾಗ ಮನೆಯ ಅಡುಗೆ ಕೋಣೆಯ ಕಿಟಿಕಿ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ.ಕಬ್ಬಿಣದ ರಾಡ್ ಬಳಸಿ ಕಿಟಿಕಿಯ ಸರಳು ಮುರಿಯಲಾಗಿದೆ.ಕೋಣೆಯೊಳಗಿದ್ದ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ , ನಗದನ್ನು ಕಳವು ಮಾಡಲಾಗಿದೆ. ಕಳವು ಮಾಡಿದ ಬಳಿಕ ಸಿ ಸಿ ಟಿವಿ ದೃಶ್ಯಗಳನ್ನು ಚಿತ್ರೀಕರಿಸುವ ಹಾರ್ಡ್ ಡಿಸ್ಕನ್ನು ಕೂಡಾ ಕೊಂಡೊಯ್ದಿದ್ದಾರೆ.ನುರಿತ ಕಳ್ಳರ ತಂಡ ಈ ಕೃತ್ಯ ನಡೆಸಿದೆ ಎನ್ನಲಾಗಿದೆ.
ಸುನಿಲ್ ರ ಮನೆ ಪಕ್ಕದ ಇನ್ನೊಂದು ಮನೆಯಲ್ಲೂ ಕಳವು ನಡೆಸಲಾಗಿದೆ. ಪ್ರಭಾಕರನ್ ಎಂಬವರ ಮನೆ ಗೆ ನುಗ್ಗಿ ಕಳ್ಳತನ ನಡೆಸಿದ್ದು , ಪ್ರಭಾಕರನ್ ಗಲ್ಫ್ ನಲ್ಲಿದ್ದು , ಪತ್ನಿ ತವರು ಮನೆಯಲ್ಲಿದ್ದಾರೆ. ಇಬ್ಬರು ಮಕ್ಕಳು ಎರ್ನಾಕುಲಂ ನಲ್ಲಿ ಕಲಿಯುತ್ತಿದ್ದಾರೆ.
ಇಲ್ಲೂ ಕೂಡಾ ಶುಕ್ರವಾರ ರಾತ್ರಿಯೇ ಕಳವು ನಡೆದಿರಬಹುದು ಎಂದು ಶನಿಕಿಸಲಾಗಿದೆ. ಆದರೆ ಮನೆಯಲ್ಲಿ ವಾರೀಸುದಾರರು ಯಾರೂ ಇಲ್ಲದೆ ಇರುವುದರಿಂದ ಕಳವಾದ ಸೊತ್ತುಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಮನೆಯಲ್ಲೂ ಸಿ ಸಿ ಟಿವಿ ಕ್ಯಾಮರಾ ಅಳವಡಿಸಲಾಗಿದ್ದು , ಇಲ್ಲಿಂದಲೂ ಹಾರ್ಡ್ ಡಿಸ್ಕನ್ನು ಕೊಂಡಿದಿರಬಹುದೆಂದು ಶಂಕಿಸಲಾಗಿದೆ. ವಾರದ ಹಿಂದೆ ಚಿಮೇನಿಯಲ್ಲಿ ದಂಪತಿಯ ಕತ್ತು ಕೊಯ್ದು ದರೋಡೆ ನಡೆಸಿದ್ದು , ರಾತ್ರಿ ಹತ್ತು ಗಂಟೆ ಸುಮಾರಿಗೆ, ಇದೆ ರೀತಿ ಬೇಕಲ ಮುಡಿಯಕ್ಕಾಲ್ ನಲ್ಲೂ ರಾತ್ರಿ 10 ಗಂಟೆ ಸುಮಾರಿಗೆ ದರೋಡೆ ನಡೆದಿದೆ. ಚಿಮೇನಿ ದರೋಡೆ ಪ್ರಕರಣದ ಬಗ್ಗೆ ದರೋಡೆಕೋರರ ಬಗ್ಗೆ ಇನ್ನೂ ಸುಳಿವು ಲಭಿಸದೆ ಪೊಲೀಸರು ಅತಂತ್ರಕ್ಕೆ ಸಿಲುಕಿದ್ದು , ಇದರ ನಡುವೆ ಮತ್ತೆರಡು ದರೋಡೆ ಪ್ರಕರಣ ನಡೆದಿದೆ.