ಮಂಗಳೂರು ಡಿ 24: ತನ್ನ ಮೆಹಂದಿಯ ದಿನವೇ ಅಂದರೆ ಡಿ 11 ರಂದು ನಾಪತ್ತೆಯಾಗಿದ್ದ ಮೂಡುಬಿದಿರೆಯ ಧರೆಗುಡ್ಡೆಯ ನಿವಾಸಿ ಪ್ರಿಯಾಂಕಳನ್ನು ಹಾಗೂ ಆಕೆಯ ಪ್ರಿಯಕರ ಹೈದರ್ ನನ್ನು ಮುಂಬೈನಲ್ಲಿ ಪತ್ತೆ ಮಾಡಿ ಶುಕ್ರವಾರ ನಗರಕ್ಕೆ ಪೊಲೀಸರು ಕರೆತಂದಿದ್ದಾರೆ. ಆಕೆಯ ತಾಯಿ ನೀಡಿದ ದೂರನ್ನು ಆಧಾರಿಸಿ ಮನೆಯವರಿಗೆ ಮತ್ತು ಬರಿಸುವ ಪದಾರ್ಥ ಕುಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ 26 ರ ವರೆಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಯಿ ನೀಡಿದ್ದ ದೂರನ್ನು ಆಧರಿಸಿ ಯುವತಿ ವಿರುದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿರುವುದು ಮತ್ತು ಅಮಲು ಪದಾರ್ಥ ಕುಡಿಸಿರುವ ಆರೋಪದ ಮೇಲೆ ಮೂಡಬಿದಿರೆ ಪೊಲೀಸರು ಕೇಸು ದಾಖಲಿಸಿದ್ದರು. ಆದ್ರೆ ಮನೆಯಿಂದ ತೆಗೆದುಕೊಂಡು ಹೋಗಿದ್ದ ಚಿನ್ನಾಭರಣ ಎಲ್ಲವೂ ಆಕೆಯ ಬಳಿಯೇ ಇರೋದ್ರಿಂದ ಕಳ್ಳತನದ ಪ್ರಕರಣ ದಾಖಲಿಸಲಾಗಿಲ್ಲ. ಅಮಲು ಆಹಾರ ನೀಡಿದ ಆರೋಪದ ಮೇಲೆ ಪ್ರಕರಣದಲ್ಲಿ ಆಕೆಯನ್ನು ಬಂಧಿಸಿದ್ದು ಶನಿವಾರ ಸಂಜೆ ನ್ಯಾಯಧೀಶರ ಎದುರು ಹಾಜರುಪಡಿಸಿದರು. ಯುವತಿಯನ್ನು ಮಂಗಳವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಧೀಶರು ಆದೇಶ ಹೊರಡಿಸಿದರು. ಹೈದರ್ ವಿರುದ್ದ ಈವರೆಗೆ ಯಾವುದೇ ಕೇಸ್ ದಾಖಲಾಗಿಲ್ಲ . ಜೆಹಾದಿಯ ಕಾರ್ಯತಂತ್ರದ ಭಾಗವಾಗೈ ಯುವತಿಯನ್ನು ಕರೆದೊಯ್ದಿದ್ದಾನೆ ಎಂಬ ಆರೋಪದ ಸಹಿತ ವಿವಿಧ ಆಯಾಮದಲ್ಲಿ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.