ಬಂಟ್ವಾಳ ಡಿ 24: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ತುಂಬೆಯಲ್ಲಿ ನಡೆಯುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕೂಡಲೇ ಈ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ತುಂಬೆ ಶಾಲಾ ಬಳಿಯಲ್ಲಿ ಮಳೆ ನೀರು ಸರಾಗವಾಗಿವ ಹರಿದು ಹೋಗಲು ಮಾಡುತ್ತಿರುವ ಕಾಮಗಾರಿ ಇದೊಂದು ಅವೈಜ್ಞಾನಿಕ ವಾಗಿದ್ದು ಜನರ ಒತ್ತಾಯ ಕ್ಕೆ ಹರಕೆ ಸಲ್ಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಈ ಜಾಗದಲ್ಲಿ ಮಳೆ ನೀರು ರಸ್ತೆಯಲ್ಲಿ ತುಂಬಿ ಕೃತಕ ಈಜುಕೊಳ ನಿರ್ಮಾಣ ವಾಗಿತ್ತು. ಸಾಕಾಗದ್ದಕ್ಕೆ ದ್ವಿ ಚಕ್ರ ವಾಹನಸವಾರರು ಬಿದ್ದು ಗಾಯಗೊಂಡ ಘಟನೆ ಗಳು ಅನೇಕ ನಡೆದಿದೆ. ಈ ಬಗ್ಗೆ ಪ್ರತಿಭಟನೆ ಗಳು ನಡೆದ ಬಳಿಕ ಈ ಬಾರಿ ಚರಂಡಿ ನಿರ್ಮಾಣ ಕ್ಕೆ ಮುಂದಾಗಿದ್ದಾರೆ. ಆದರೆ ಮಳೆ ನೀರು ಹರಿದು ಹೋಗಲು ಮಾಡಿದ ಈ ಕಾಮಗಾರಿ ಯಲ್ಲಿ ನೀರು ಹೋಗಲು ಸಾಧ್ಯ ವಿಲ್ಲ.ಕೆಲವು ಕೆಡೆ ಬಂಡೆಕಲ್ಲುಗಳಿದ್ದು ಅದನ್ನು ತೆಗೆಯದೆ ಅದರ ಮೇಲೆ ಯೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ಒಂದೇ ರೀತಿಯಲ್ಲಿ ಚರಂಡಿ ಮಾಡದೆ ಏರಿಳಿತಗಳು ಇದ್ದು ಈ ಚರಂಡಿಯ ಲ್ಲಿ ನೀರು ಹೋಗದೆ ಮತ್ತೆ ಈ ಪ್ರದೇಶದಲ್ಲಿ ಈಜುಕೊಳ ನಿರ್ಮಾಣ ವಾಗುತ್ತದೆ , ಜನರ ಹಣವನ್ನು ಈ ರೀತಿಯಲ್ಲಿ ಪೋಲು ಮಾಡದೆ ಕಾಮಗಾರಿ ಉಪಯೋಗ ಅಗುವ ರೀತಿಯಲ್ಲಿ ಕಾಮಗಾರಿಯನ್ನು ಮಾಡಿ. ಹಾಗಾಗಿ ಇದಕ್ಕೆ ಸಂಬಂಧಿಸಿದ ಇಂಜಿನಿಯರ್ ಕೂಡಲೇ ಈ ಕಾಮಗಾರಿಯನ್ನು ಪರಿಶೀಲಿಸಿ ವ್ಯವಸ್ಥಿತವಾಗಿ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.