ಮಂಗಳೂರು,ಆ 26 (Daijiworld News/RD): ಸೋಮವಾರ ಮಧ್ಯಾಹ್ನ ಎಡೆಬಿಡದೆ ಸುರಿದ ಭಾರೀ ಮಳೆಗೆ ನಗರದ ಕೊಟ್ಟಾರಚೌಕಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ನಗರದ ಕೊಟ್ಟಾರಚೌಕಿಯಲ್ಲಿ ರಸ್ತೆಯು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಸಂಚಾರರುವ ಪರದಾಡುವಂತೆ ಆಗಿದೆ. ಅಲ್ಲದೆ ಆ ಭಾಗದ ರಾಜ ಕಾಲುವೆಗಳ ಹೂಳೆತ್ತದ ಕಾರಣ ಅಲ್ಲಿನ ಅಕ್ಕ ಪಕ್ಕದ ಅಂಗಡಿಗಳಿಗೆ ನೀರು ನುಗ್ಗಿವೆ ಎಂದು ತಿಳಿದುಬಂದಿದೆ. ನಗರದ ಸುಲ್ತಾನ್ ಬತ್ತೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಠದ ಕಣಿವೆಯಲ್ಲಿರುವ 4 ಮನೆಗಳು ಕೂಡ ಅಪಾಯದಲ್ಲಿವೆ ಎಂದು ತಿಳಿದುಬಂದಿದೆ.