ಜಿ. ಪರಮೇಶ್ವರ್ ಅವರಿಂದ ತೆರವಾದ ಗೃಹ ಖಾತೆ ಮೇಲೆ ಎಲ್ಲರ ಕಣ್ಣಿತ್ತು. ಈ ನಡುವೆ ಸಚಿವ ರಮಾನಾಥ ರೈ ಅವರು ಗೃಹಖಾತೆ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರೈಗೆ ಗೃಹ ಖಾತೆ ಕೈ ತಪ್ಪಿದೆ. ಕಾಂಗ್ರೆಸ್ ಪಕ್ಷ ರೈಗೆ ಗೃಹಖಾತೆ ನೀಡುವಲ್ಲಿ ಕೈ ಕೊಟ್ಟಿದೆ. ಕಳೆದ ಒಂದು ತಿಂಗಳಿನಿಂದ ಸಚಿವ ರಮಾನಾಥ ರೈ ಅವರಿಗೆ ಗೃಹಖಾತೆ ಇಲಾಖೆ ದೊರಕಿದೆ ಎನ್ನುವ ನಿರೀಕ್ಷೆಗಳು ಎಲ್ಲೆಡೆ ಗರಿಗೆದರಿತ್ತು. ಆದರೆ ಎಲ್ಲಾ ಲೆಕ್ಕಾಚಾರಗಳು ಸಂಪೂರ್ಣ ಬದಲಾಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಗೃಹ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.