ಬೆಂಗಳೂರು, ಸೆ.14: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಸಾವಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೆಂಪಯ್ಯ ನಿವಾಸದಲ್ಲಿ ಡಿವೈಎಸ್ಪಿ ಗಣಪತಿ ಕುರಿತ ಮಾಹಿತಿ ಲಭ್ಯವಾಗಿವೆ. ಕೆಂಪಯ್ಯ ಗೃಹ ಇಲಾಖೆಯ ಸಲಹೆಗಾರರಾಗಿದ್ದು ಗಣಪತಿ ನಿಗೂಢ ಸಾವಿನ ಹಿಂದೆ ಇವರ ಕೈವಾಡವಿದೆ ಅನ್ನುವ ಅನುಮಾನಗಳು ವ್ಯಕ್ತವಾಗಿದೆ.
ಎಂ.ಕೆ.ಗಣಪತಿ ನಿಗೂಢ ಸಾವಿನ ಕುರಿತಂತೆ, ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ವಿರುದ್ಧದ ಸಾಕ್ಷ್ಯಗಳು ಮತ್ತು ದಾಖಲೆಗಳು ಸಿಬಿಐ ಕೈಗೆ ತಲುಪಿವೆ. ಡಿವೈಎಸ್ಪಿ ಗಣಪತಿ ಅವರು ಮಡಿವಾಳ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಕೆಂಪಯ್ಯ ಕಿರುಕುಳ ನೀಡಿದ್ದರು ಎನ್ನಲಾಗಿದೆ.