ಮುಲ್ಕಿ ಡಿ24 : ಇಲ್ಲಿನ ಬಸ್ ನಿಲ್ದಾಣದ ಬಳಿಯಿರುವ ಉದ್ಯಮಿ ಮನೆ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ ಘಟನೆ ಡಿ 23 ರ ಶನಿವಾರ ತಡರಾತ್ರಿ ನಡೆದಿದೆ. ಉದ್ಯಮಿ ನಾಗರಾಜ್ ಎಂಬುವವರ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಪರಿಣಾಮ ಮನೆ ಹಾಗೂ ಕಾರಿಗೆ ಗುಂಡು ತಗುಲಿದೆ. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ .
ಒಂದು ಗುಂಡು ನಾಗರಾಜ್ರ ಕಾರಿಗೆ ತಗಲಿದ್ದರೆ, ಇನ್ನೆರಡು ಮನೆಯ ಬಾಗಿಲಿಗೆ ತಗುಲಿವೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಮತ್ತಿತರರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಕೃತ್ಯವು ಭೂಗತ ಪಾತಕಿಗಳದ್ದಾಗಿರಬಹುದೆಂದು ಶಂಕಿಸಲಾಗಿದೆ.