ಮಂಗಳೂರು, ಮೇ. 22 (DaijiworldNews/AK): ಹದಿನಾರು ( ಮೇ 22 2010ರ) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ಸಾಮರಸ್ಯ ಮಂಗಳೂರು ಪದಾಧಿಕಾರಿಗಳು ತಣ್ಣೀರುಭಾವಿ ಬಳಿ ನಿರ್ಮಿಸಿರುವ ಸ್ಮಾರಕಕ್ಕೆ ತೆರಳಿ , ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ,ರೇಣುಕಾ ಶೆಟ್ಟಿ , ಪ್ರತಿಭಾ ಶೆಟ್ಟಿ , ಚಿತ್ರ ಕಿಣಿ , ವಿದ್ಯಾ ಶೆಣೈ , ಮಮತಾ ಕುಡ್ವ ಮತ್ತಿತರು ಉಪಸ್ಥಿತರಿದ್ದರು. ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಂಗಳೂರು ವಿಮಾನ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಒಂದು ಕರಾಳ ಘಟನೆಯಾಗಿ ಉಳಿದಿದೆ. ಈ ದುರಂತವು ವಿಮಾನಯಾನ ಸುರಕ್ಷತೆಯ ಮೇಲೆ ಗಮನ ಹರಿಸಲು ಒಂದು ಎಚ್ಚರಿಕೆಯ ಕರೆಯಾಗಿದೆ.