ಮಂಗಳೂರು, ಮೇ. 23 (DaijiworldNews/AA): ಯುವಜನತೆ ಹಾಗೂ ಕುಟುಂಬಗಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿರುವ "ಫಂಟೋಪಿಯಾ - ಮೆಗಾ ಮನರಂಜನಾ ಉತ್ಸವ 2026" ಕಾರ್ಯಕ್ರಮವು ಮೇ 24ರಂದು ನಗರದ ಕದ್ರಿ ಪಾರ್ಕ್ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎ೦ದು ಪ್ರೆಸಿಡೆನ್ಸಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ಶೆಣೈ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಸಂಜೆ 4ರಿಂದ ರಾತ್ರಿ ೮ರವರೆಗೆ ನಡೆಯಲಿದೆ. ಈ ಸಮಾರಂಭಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಕದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಜ್ಯೋತಿ ಬಿ., ನಟಿಯರಾದ ಶೈಲಶ್ರೀ ಮೂಲ್ಕಿ ಹಾಗೂ ವೆನ್ಸಿಟಾ ಡಯಾಸ್ ಆಗಮಿಸಲಿದ್ದಾರೆ ಎ೦ದರು.
ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಕಾರ್ಯಕ್ರಮದಲ್ಲಿ ಮನರಂಜನಾ ಚಟುವಟಿಕೆಗಳು, ಯುವಜನರಿಗಾಗಿ ವಿವಿಧ ಸ್ಪರ್ಧೆಗಳು, ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದೆ. ಎಲ್ಲಾ ವಯೋಮಾನದವರಿಗೂ ಮನಸೂರೆಗೊಳ್ಳುವ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳು ನೀಡಲಾಗುವುದು ಎಂದು ಹೇಳಿದರು.
ರೋಮಾಂಚಕ ಆಟಗಳು ಮತ್ತು ಆಕರ್ಷಕ ಚಟುವಟಿಕೆಗಳು:
ಚಿತ್ರಕಲೆ ಸ್ಪರ್ಧೆ
ಏಮ್ ಅಂಡ್ ಗೇನ್
ಲಕ್ಕಿ ರಿಂಗ್
ಟಾಪ್ಸಿ ಟರ್ವಿ ಕ್ಯಾಚ್
ಸ್ಪ್ಲಾಶ್ 'ಎನ್' ಸ್ಟ್ಯಾಕ್
ಕಪ್ ಸ್ಟ್ಯಾಕ್ ಚಾಂಪ್ಸ್
ಮಿಕ್ಕಿ ಮಂಚ್ ಮೇನಿಯಾ
ಹೆಚ್ಚಿನ ಮಾಹಿತಿಗಾಗಿ +91 82771 46044 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ನ ಸಹಾಯಕ ನಿರ್ದೇಶಕ ಡಾ. ಅರುಣ್ ದೇವರಾಜ್, ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲೆ ಮಿಸ್ ಶೈಲಾ ಸಲ್ಡಾನ್ಹಾ, ಮಾರುಕಟ್ಟೆ ಮುಖ್ಯಸ್ಥರಾದ ಜಗನ್ನಾಥ ಶೆಟ್ಟಿ,ಕನ್ನಡ ಪ್ರಾಧ್ಯಾಪಕರಾದ ಶರತ್ ಕೆಕೆ, ಮಾರ್ಕೆಟಿಂಗ್ ತಂಡದ ಸದಸ್ಯರಾದ ಸುಧೀಶ, ವರ್ಷ ಉಪಸ್ಥಿತರಿದ್ದರು.