ಮಂಗಳೂರು ಡಿ 25 : ನಗರದ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ದ್ವನಿವರ್ಧಕ ಬಳಸುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ ಎಂದು ಆಕ್ಷೇಪಿಸಿ ಸ್ಥಳೀಯ ನಿವಾಸಿ ಬ್ಲೇನಿ ಡಿ ಸೋಜ ಎಂಬವರು ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ನೀಡಿದ ದೂರನ್ನು ಹಿಂಪಡೆಯಲು ನಿರ್ಧರಿಸಿದ್ದು, ಇದರಿಂದ ಪ್ರಕರಣ ಸುಖಾಂತ್ಯ ಕಾಣುವ ನಿರೀಕ್ಷೆ ಇದೆ.
ಬ್ಲೇನಿ ಅವರ ದೂರಿಗೆ ಸ್ಪಂದಿಸಿದ ಮುಜರಾಯಿ ಇಲಾಖೆ ಕದ್ರಿ ಕದ್ರಿ ದೇಗುಲದ ಕಾರ್ಯನಿರ್ವಹಣ ಅಧಿಕಾರಿ ಅವರಿಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು. ಆದರೆ ಈ ವಿಚಾರ ತಿಳಿದ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಜಮಾಯಿಸಿ ಶನಿವಾರ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ದ್ವನಿವರ್ಧಕ ನಿಷೇಧಿಸಬಾರದು ಎಂದು ಕಾರ್ಯನಿರ್ವಹಣಾ ಅಧಿಕಾರಿ ಅವರಿಗೆ ಮನವಿ ಮಾಡಿದ್ದರು. ಒಂದು ವೇಳೆ ನಿಷೇಧ ಹೇರಿದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.
ಆದರೆ ಈ ಸುದ್ದಿ ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಬ್ಲೇನಿ ಡಿ ಸೋಜಾ ತಾವು ನೀಡಿದ ಕೇಸು ವಾಪಸು ತೆಗೆದುಕೊಳ್ಳುವುದಾಗಿ ತಿಳಿಸಿದರು. ಆದರೆ ಬ್ಲೇನಿ ವಿರುದ್ದ ಇದೀಗ ಹೆಸರನ್ನು ಪೋರ್ಜರಿ ಮಾಡಿದ ಬಗ್ಗೆ ವರದರಾಜ ಬಾಳಿಗ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.