ಕಾಸರಗೋಡು, ಆ 29 (DaijiworldNews/SM): ಕೇರಳದಲ್ಲಿ ಭಾರಿ ಸುದ್ದಿಯಾಗಿದ್ದ ಸಫಿಯಾ(14) ಕೊಲೆ ಪ್ರಕರಣದ ಒಂದನೇ ಆರೋಪಿ ಮುಳಿಯಾರು ಮಸ್ತಿಕುಂಡು ನಿವಾಸಿ ಹಾಗೂ ಗೋವಾದಲ್ಲಿ ಗುತ್ತಿಗೆದಾರನಾಗಿದ್ದ ಕೆ.ಸಿ.ಹಂಸ(51)ನಿಗೆ ಘೋಷಿಸಿದ್ದ ಗಲ್ಲು ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿದೆ.
2017ರ ಜುಲೈ 16ರಂದು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಕರಣದ ಐದನೇ ಮೂರನೇ ಆರೋಪಿಯಾಗಿರುವ ಹಂಝನ ಪತ್ನಿ ಮೈಮೂನಾ(37)ಳಿಗೆ ಘೋಷಿಸಿದ್ದ ಮೂರು ವರ್ಷ ಸಜೆ, ದಂಡ, ನಾಲ್ಕನೇ ಆರೋಪಿ ಹಂಝನ ಸಂಬಂಧಿಕ ಕುಂಬಳೆ ಆರಿಕ್ಕಾಡಿಯ ಅಬ್ದುಲ್ಲ(58)ನಿಗೆ ನೀಡಲಾಗಿದ್ದ ಮೂರು ವರ್ಷದ ಕಠಿಣ ಸಜೆಯನ್ನು ಹೈಕೋರ್ಟಿನ ವಿಭಾಗೀಯ ಪೀಠ ರದ್ದುಗೊಳಿಸಿದೆ.