ಕುಂದಾಪುರ, ಆ 29 (DaijiworldNews/SM): ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ಪತ್ನಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಲ್ಲದೇ ಮನೆಯವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕುಂದಾಪುರದಲ್ಲಿ ಕೇಳಿ ಬಂದಿದ್ದು, ಈ ಬಗ್ಗೆ ಕುಂದಾಪುರ ಠಾಣೆಗೆ ದೂರು ನೀಡಲಾಗಿದೆ.
ತಾಲೂಕಿನ ವಕ್ವಾಡಿ ಗ್ರಾಮದ ಮೂಡು ಗೋಪಾಡಿ ಅಶೋಕ ನಗರದ ಹಮ್ಜಾ ಎಂಬುವವರ ಮನೆಯಲ್ಲಿ ಭಟ್ಕಳ ತಾಲೂಕು ವೆಂಕಟಾಪುರ ಗ್ರಾಮ ಜೈನಾಬಿ ಮಂಜಿಲ್ ಮಕ್ಕಾ ಕಾಲನಿಯ ಯುವತಿಯೊಂದಿಗೆ ರಿಯಾಜ್ ಯಾನೆ ಅಬ್ದುಲ್ ಅಮೀರ್ ಎಂಬಾತ 2018ರಲ್ಲಿ ವಿವಾಹವಾಗಿದ್ದ.
ಮದುವೆಯ ಬಳಿಕ ಯುವತಿಯ ಗಂಡನ ಮನೆಯಲ್ಲಿಯೇ ಇದ್ದು, ಆ ಸಂದರ್ಭದಲ್ಲಿ ಆಕೆಯ ಗಂಡ ರಿಯಾಜ್ ಯಾನೆ ಅಬ್ದುಲ್ ಅಮೀರ್, ಮಾವ ಹಮ್ಜಾ, ಅತ್ತೆ ಬಲ್ಕಿಸ್, ಹಾಗೂ ನಾದಿನಿಯರಾದ ಜಮೀಲಾ ಮತ್ತು ಶಬನಾ ಎಂಬುವರು ಕಿರುಕುಳ ನೀಡಿದ್ದಾರೆ. ಮದುವೆಯ ಸಮಯ ವರದಕ್ಷಿಣಿ ಹಣ, ಚಿನ್ನ ತಂದುಕೊಟ್ಟಿಲ್ಲ ಈಗ ತಂದುಕೊಡು ಎಂದು ಆಕೆಗೆ ಹಿಂಸೆ ನೀಡಿದ್ದಾರೆ. ಮಾತ್ರವಲ್ಲದೆ ಆಗಸ್ಟ್ 27ರಂದು ಇವರೆಲ್ಲರೂ ಸೇರಿಕೊಂಡು ಆಕೆಯ ಬಳಿ ವರದಕ್ಷಿಣೆ ತರುವಂತೆ ಒತ್ತಾಯಿಸಿ, ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬುವುದಾಗಿ ಆಕೆ ಕುಂದಾಪುರ ಠಾಣೆಗೆ ದೂರು ನೀಡಲಾಗಿದೆ.