ಬೆಳ್ತಂಗಡಿ, ಆ 31 (Daijiworld News/MSP): ನೆರೆಪೀಡಿತ ಪ್ರದೇಶಗಳಾದ ಅನಾರು, ಚಾರ್ಮಾಡಿ ಪ್ರದೇಶಗಳಿಗೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲು ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸ್ವಾಗತಿಸಿದರು.
ಬಳಿಕ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಹಾನಿಯಾಗಿದ್ದು ಮನೆ, ಕೃಷಿ, ರಸ್ತೆ, ಹಾಗೂ ಜಾನುವಾರುಗಳು ಸೇರಿದಂತೆ ಸುಮಾರು 500 ಕೋಟಿ ರೂ ನಷ್ಟವಾಗಿದ್ದು ಇವರಿಗೆ ಸೂಕ್ತ ಪರಿಹಾರ ನೀಡಲು ಸರಕಾರವನ್ನು ಒತ್ತಾಯಿಸಬೇಕು ಎಂದು ಶಾಸಕ ಬಂಗೇರ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ ಖಾದರ್, ವಿಧಾನಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಐವನ್ ಡಿಸೋಜಾ, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀನಿವಾಸ ಕಿಣಿ, ಮಿಥುನ್ ರೈ, ನಗರ ಕಾಂಗ್ರೇಸ್ ಅಧ್ಯಕ್ಷ ರಾಜಶೇಖರ ಅಜ್ರಿ, ನ.ಪಂ ಸದಸ್ಯ ಜಗದೀಶ್ ಡಿ, ತಾಲೂಕು ಯೂತ್ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ ಸದಸ್ಯೆ ನಮಿತ, ಕಣಿಯೂರು ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ, ತಾ.ಪಂ ಸದಸ್ಯರಾದ ಸೆಬಾಸ್ಟಿಯನ್, ವಿನುಷಾ ಪ್ರಕಾಶ್, ಉಷಾ ಶರತ್, ಮುಖಂಡರುಗಳಾದ ಪಿತಾಂಬರ ಹೆರಾಜೆ, ಪ್ರಭಾಕರ ಡಿ ಧರ್ಮಸ್ಥಳ, ವೆಂಕಪ್ಪ ಗೌಡ ಸುಳ್ಯ, ನಾರಾಯಣ ಮಚ್ಚಿನ, ಅಶ್ರಫ್ ನೆರಿಯ, ಮೊದಲಾದವರು ಉಪಸ್ಥಿತರಿದ್ದರು.