ವಿಟ್ಲ: ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಜೀರ್ಣೋದ್ದಾರಕ್ಕಾಗಿ ಅದೃಷ್ಟ ನಿಧಿ ಕೂಪನ್
Sat, Aug 31 2019 05:46:24 PM
ವಿಟ್ಲ,ಆ 31 (Daijiworld News/RD): ಸರ್ವ ಸಮಾಜದ ಉದ್ದಾರ ಉದ್ದೇಶದಿಂದ ಹಿರಿಯರ ಸಂಕಲ್ಪದಂತೆ ಶ್ರೀ ಕ್ಷೇತ್ರ ಸ್ಥಾಪನೆಯಾಗಿದೆ. 2021ಕ್ಕೆ ನಡೆಯುವ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಹವಕ್ಕೆ ಪ್ರತಿಯೊಬ್ಬ ಭಕ್ತರು ಕೈ 'ಜೋಡಿಸಬೇಕು ಎಂದು. ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಹೇಳಿದರು.
ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಕೆಲಸಕಾರ್ಯದ ಯಶಸ್ವಿಗೆ ಅದೃಷ್ಟ ನಿಧಿ ಯೋಜನೆಯ ಕೂಪನ್ ಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಚಲನಚಿತ್ರ ನಟ ಕಾಸರಗೋಡು ಚಿನ್ನ ಅವರು, ಪ್ರಥಮ ಕೂಪನ್ನು ಶರತ್ ಅರಸೀಕೆರೆ ಅವರಿಗೆ ವಿತರಿಸಿದರು.
ಶ್ರೀ ಕ್ಷೇತ್ರ ಕುಕ್ಕಾಜೆಯ ಮೊಕ್ತೇಸರ ಎಂ.ಕೆ. ಕುಕ್ಕಾಜೆ. ಅಧ್ಯಕ್ಷತೆ ವಹಿಸಿದ್ದರು. ಬಾಳೆಕಲ್ಲು ಗರಡಿ ಮನೆ ಮೊಕ್ತೇಸರ ಕೊರಗಪ್ಪ ಪೂಜಾರಿ ಉದ್ಭಾಟಿಸಿದರು. ಕಾಂಞಂಗಾಡ್ ಶ್ರೀ ಮೂಕಾಂಬಿಕ ಕ್ಷೇತ್ರದ ಧರ್ಮದರ್ಶಿ ಮಹಾಲಿಂಗಪಾತ್ರಿ, ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ ಆನಂದ, ಸಂಕಪ್ಪಪೂಜಾರಿ ಬಾಡೂರು, ಪುರುಷೋತ್ತಮ ಕಾರಾಜೆ, ರವಿ ಕುಟ್ಯಮಡ್ಕ ರತನ್ ಮೈಸೂರು, ಸಂತೋಷ್ ಸಕಲೇಸಪುರ, ನಳಿನಾಕ್ಷಿ, ಉಪಸ್ಥಿತರಿದ್ದರು. ಶಶಿಕಲಾ ಪ್ರಾರ್ಥಿಸಿದರು. ಆನಂದ ಮಾಸ್ಟರ್ ಸ್ವಾಗತಿಸಿದರು. ರವಿ ಎಸ್.ಎಂ ವಂದಿಸಿದರು. ಲವಾನಂದ ಎಲಿಯಾಣಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಶ್ರೀ ಕ್ಷೇತ್ರದಲ್ಲಿ ದೇವರಿಗೆ ಸೋಣ ತಿಂಗಳ ವಿಶೇಷ ಪೂಜೆ ನಡೆಯಿತು.