ಮಂಗಳೂರು,ಸೆ 1 (Daijiworld News/RD): ನಗರದ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು 1 ಕೆ.ಜಿ. 103 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಸಿನಾನ್.ಪಿ. (21) , ಹಫೀಜ್ ಅಮೀನ್ (21) , ಜುಹೈರ್.ಕೆ.ಪಿ. (21), ಆದರ್ಶ್(20), ಮೊಹಮ್ಮದ್ ನಿಹಾಲ್.ಆರ್.ಕೆ. (20), ಬಿಶ್ರುಲ್ ಹಫೀ (20), ಜಾಕೀರ್ ಆಲಿ.ಪಿ. (22), ಆರೋಪಿಗಳಾಗಿದ್ದು, ಇವರು ಮೂಲತಃ ಕೇರಳ ರಾಜ್ಯದವರು.
ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರು ಸುಮಾರು 1 ಕೆ.ಜೆ. 103 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು ಇದರ ಅಂದಾಜು ಮೌಲ್ಯ 41 ಸಾವಿರ ಇರಬಹುದು ಎನ್ನಲಾಗಿದೆ. ಜೊತೆಗೆ ಬುಲೆಟ್ ಬೈಕ್, 6 ಮೊಬೈಲ್ ಪೋನ್, ಮತ್ತು 460 ನಗದು ಹಣವನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ನೇತೃತ್ವದಲ್ಲಿ ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಯವರು ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.