ಮಂಗಳೂರು ಡಿ 25 : ಮಾಜಿ ಪ್ರಧಾನಿ ಹಾಗೂ ಈ ದೇಶ ಕಂಡ ಅಪ್ರತಿಮ ನಾಯಕ ಆಟಲ್ ಬಿಹಾರಿ ವಾಜಪೇಯಿ ಅವರ 93 ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಹಲವೆಡೆ ಇಂದು ಅನೇಕ ಸೇವಾ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಯಿತು.
ಮಂಗಳೂರು ನಗರ ದಕ್ಷಿಣ ಬಿಜೆಪಿ ಘಟಕದ ವತಿಯಿಂದ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬೆಳಗ್ಗೆ ಸುಮಾರು 11.30 ಕ್ಕೆ ತೆರಳಿದ ತಂಡ ವೆನ್ಲಾಕ್ ಅಸ್ಪತ್ರೆ ರೋಗಿಗಳಿಗಾಗಿ ಐದು ವೀಲ್ಚೇರ್ಗಳನ್ನು ಉಚಿತವಾಗಿ ನೀಡಲಾಯಿತು. ಸಂಸದ ನಳಿನ್ ಕುಮಾರ್ ಅವರು ಈ ವೀಲ್ಚೇರ್ಗಳನ್ನು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಜತೆಗೆ, ನಗರದ ಲೇಡಿಗೋಶನ್ ಅಸ್ಪತ್ರೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯಂತ್ರ ಹಾಗೂ ವಾಟರ್ರ್ ಹೀಟರ್ ಮತ್ತು 300 ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಇದರ ಹೊರತಾಗಿ, ಕೋಡಿಯಾಲ್ಬೈಲ್ನಲ್ಲಿರುವ ಡಾ. ಗಿರಿಧರ್ ರಾವ್ ಸಂಜೀವ್ ಬಾಯಿ ವೃದ್ಧಾಶ್ರಮದಲ್ಲಿ 40 ಮಂದಿ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು,ಹಾಗೂ ಶಿವಭಾಗ್ ನಲ್ಲಿರುವ್ ಸಿಟಿಜನ್ ಎಲೈಯನ್ಸ್ ಫಾರ್ ರೂರಲ್ ಡೆವಲೆಫ್ ಮೆಂಟ್ ಮತ್ತು ಸಂವೇಧನಾ ಸೊಸೈಟಿಯಲ್ಲಿ 50 ಜನರಿಗೆ ಹಣ್ಣು ಹಂಪಲು , ಜೆಪ್ಪುವಿನ ಭಗಿನಿ ಸಮಾಜದ ಶಿಶು ನಿಲಯದಲ್ಲಿ 50 ಮಂದಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡುವ ಮೂಲಕ ವಾಜಪೇಯಿ ಜನ್ಮದಿನಾಚರಣೆಯನ್ನು ಬಿಜೆಪಿ ಪಕ್ಷ ಆರ್ಥಪೂರ್ಣವಾಗಿ ಆಚರಿಸಿದೆ. ಈ ಎಲ್ಲಾ ಸೇವಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ , ಬಿಜೆಪಿ ಮುಖಂಡ, ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದರು.