ಮಂಗಳೂರು ಡಿ 26: ನಗರದಲ್ಲಿ ನಿಷೇದಿತ ಮಾದಕ ವಸ್ತಗಳಾದ ಎಲ್ ಎಸ್ ಡಿ , ಎಂ.ಡಿ ಎಂ.ಎ ಮತ್ತು ಎಂ ಡಿ ಎಂ ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ತಂಡದವರು ಭೇದಿಸಿದ್ದು ಇದರಲ್ಲಿ ಬಂಧನಕ್ಕೆ ಬಾಕಿ ಇದ್ದ ಇನ್ನು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಹಾಯಕ ಪೊಲಿಸ್ ಆಯುಕ್ತರಿಗೆ ಬಂದ ಖಚಿತ ಮಾಹಿತಿಯಂತೆ ಈ ಮೊದಲು ನಿಖಿಲ್ ಕೆ.ಬಿ, ಶ್ರವಣ ಪೂಜಾರಿ , ರೋಶನ್ ವೇಗಸ್ , ಬಾಶೀಂ ಬಶೀರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ಬಾಕಿ ಇದ್ದ ಆರೋಪಿಗಳಾದ ಹಂಪನಕಟ್ಟೆಯ ಕಾರ್ಲ್ ಡಿ ಕುನ್ಹ ಯಾನೆ ಅಸ್ಟಿನ್ (29)ಹಾಗೂ ಕುಲಶೇಖರ್ ಸಿಲ್ವರ್ ಗೇಟ್ ನ ನಿವಾಸಿ ಅನೂಪ್ ಡಿ ಅಲ್ಮೇಡಾ (26) ವರನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ 93 ಎಂ ಡಿ ಎಂ ಪೀಲ್ಸ್ ಗಳನ್ನು , 1ಹುಂಡೈ ಇಯಾನ್ ಕಾರು , 3 ಮೊಬೈಲ್ ಪೋನ್, 30,850 ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಸ್ವಾದೀನ ಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ ರೂ 2,36,000 ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ ಆರ್ ಸುರೇಶ್ ರವರ ನಿರ್ದೇಶನ ದಂತೆ , ಶ್ರೀ ಹನುಮಂತರಾಯ ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ ) ಮತ್ತು ಉಮಾ ಪ್ರಶಾಂತ್ ಡಿಸಿಪಿ (ಅಪರಾದ ಮತ್ತು ಸಂಚಾರ ವಿಭಾಗ ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ ಸಿ ಪಿ ರಾಮರಾವ್ ರವರು ಉಳ್ಳಾಲ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಮತ್ತು ಸಿಬ್ಬಂದಿಯವರಾದ ಎಎಸ್ಐ ಸುಂದರ ಅಚಾರ್, ಹೆಚ್ ಸಿ ಗಳಾದ ಮೋಹನ್ ಕೆ ವಿ , ಗಿರೀಶ್ ಬೆಂಗ್ರ್ರೆ, ರವಿನಾಥ್, ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ ಯಂ, ರವಿಚಂದ್ರ, ಪಡ್ರೆ , ದಾಮೋದರ, ರಾಜರಾಮ ಕೆ, ಮಹಮದ್ ಶರೀಪ್, ದಯಾನಂದ, ಸುದೀರ್ ಶೆಟ್ಟಿ, ಮಹೇಶ್ ಪಾಟಾಳಿ ಮತ್ತು ಮೊಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.