ಲಂಡನ್: ಮುಂಬೈ ಸರಣಿ ಸ್ಪೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಮಟ್ಟ ಹಾಕುವ ವಿಚಾರದಲ್ಲಿ ಭಾರತ ಮೊದಲ ಜಯ ಸಾಧಿಸಿದೆ. ಬ್ರಿಟನ್ ಸರಕಾರ ದಾವೂದ್ ಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ವಶ ಪಡಿಸಿಕೊಂಡಿದೆ. ಬ್ರಿಟನ್ ವ್ಯಾಪ್ತಿಯಲ್ಲಿ ದಾವೂದ್ ಬೇನಾಮಿ ಹೆಸರಲ್ಲಿ 42,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಲಂಡನ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42,000 ಕೋಟಿ ರೂ. ಮೌಲ್ಯದ ಆಸ್ತಿಗಳಿಗೆ ಬೀಗ ಜಡಿದಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ದಾವೂದ್ ಬಗ್ಗೆ ಪ್ರಸ್ತಾವಿಸಿದ್ದರು. ಜತೆಗೆ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ನ ಆಸ್ತಿ ಕುರಿತಂತೆ ದಾಖಲೆಗಳನ್ನೂ ನೀಡಿ ಬಂದಿದ್ದರು. ಈ ದಾಖಲೆಗಳ ಆಧಾರದಲ್ಲೇ ಅಲ್ಲಿನ ಸರಕಾರ ಭೂಗತಪಾತಕಿಯ ಆಸ್ತಿ ವಶಪಡಿಸಿಕೊಂಡಿದೆ.
1993ರ ಮುಂಬಯಿ ಸ್ಫೋಟ ಪ್ರಕರಣದ ರೂವಾರಿ ದಾವೂದ್ ಅಂದಾಜು 6.7 ಶತ ಕೋಟಿ ಡಾಲರ್ ಗಳಷ್ಟು ಅಕ್ರಮ ಆಸ್ತಿ ಹೊಂದಿ ದ್ದಾನೆ ಎಂದು ಜಾರಿ ನಿರ್ದೇಶನಾಲಯ ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರಕಾರ 2015ರಲ್ಲಿ ಬ್ರಿಟನ್ ಸರಕಾರಕ್ಕೆ ಮಾಹಿತಿ ನೀಡಿತ್ತು. ತಕ್ಷಣವೇ ಆಸ್ತಿ ಜಪ್ತಿ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಈ ಮನವಿ ಯನ್ನು ಆಧರಿಸಿಯೇ ಬ್ರಿಟನ್ ಸರಕಾರ ಹಠಾತ್ತಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಬ್ರಿಟನ್ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿರುವ ಮಾಹಿತಿಯಂತೆ ದಾವೂದ್ ಯಾವುದೇ ಪರವಾನಿಗೆ ಇಲ್ಲದೆ ಇಷ್ಟೊಂದು ಆಸ್ತಿ ಮಾಡಿದ್ದರು ಎನ್ನಲಾಗಿದೆ. ಇನ್ನು ಈ ಬಗ್ಗೆ ಮಾದ್ಯಮದೊಂದಿಗೆ ಮಾತಾನಾಡಿದ ಕೇಂದ್ರ ಸರ್ಕಾರ ಸಚಿವ ಜ| ವಿ.ಕೆ. ಸಿಂಗ್, "ದಾವೂದ್ ಕುರಿತಾಗಿ ನಾನು ಏನನ್ನೂ ಮಾತ ನಾಡುವುದಿಲ್ಲ. ಆದರೆ ಕೆಲವೊಂದು ಸಂಗತಿಗಳು ನಡೆಯುತ್ತಿವೆ. ಅಂದಹಾಗೆ "ಬ್ಯಾಗ್ನಲ್ಲಿ ಸಿಕ್ಕಿಕೊಂಡಿರುವ ಬೆಕ್ಕು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ.