ಬೆಳ್ತಂಗಡಿ, ಸೆ 03 (DaijiworldNews/SM): ವ್ಯಕ್ತಿಯೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಪಿಲ್ಯ ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಪಿಲ್ಯ ಗ್ರಾಮದ ಶೇಡಿ ಹೊಸ ಮನೆ ತಿಮ್ಮಪ್ಪ ಎಂಬುವರ ಪುತ್ರ ಉದಯ(38) ಎಂದು ಗುರುತಿಸಲಾಗಿದೆ. ಇವರು ಸನಿಹದ ಬಡಗಕಾರಂದೂರು ಗ್ರಾಮ ವ್ಯಾಪ್ತಿಯಲ್ಲಿನ ನಡಾಯಿ ಬೈಲು ಎಂಬಲ್ಲಿ ತೊರೆಯೊಂದಕ್ಕೆ ಹಾಕಿದ್ದ ಮರದ ಕಾಲು ಸಂಕವನ್ನು ದಾಟುವಾಗ ಆಕಸ್ಮಿಕವಾಗಿ ಜಾರಿ ಹರಿಯುವ ನೀರಿಗೆ ಬಿದ್ದರು ಎನ್ನಲಾಗಿದೆ.
ಕೊಚ್ಚಿಕೊಂಡು ಹೋಗಿದ್ದ ಇವರ ಮೃತ ಶರೀರವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ.
ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.