ಮಂಗಳೂರು, ಸೆ 03 (DaijiworldNews/SM): ಗಣೇಶೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಸಂಗೀತ ನಿರ್ಮಾಪಕ ಹಾಗೂ ಗಾಯಕ ಜೆರಿ ಬಜ್ಜೋಡಿ ಅವರು ಸೆಪ್ಟೆಂಬರ್ 3ರ ಮಂಗಳವಾರದಂದು ನಿಧನರಾಗಿದ್ದಾರೆ.
ಬಿಜೈ ಬಳಿಯ ಪಿಂಟೋ ಲೇನ್ ನಲ್ಲಿ ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ನವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗಾಯಕರಾಗಿ ಪ್ರೇಕ್ಷಕರಿಗೆ ರಸದೌತನ ನೀಡುತ್ತಿದ್ದರು. ಸಂಗೀತ ರಸಮಂಜರಿ ನಡೆಯುತ್ತಿದ್ದ ಸಂದರ್ಭದಲ್ಲೇ ಜೆರಿ ಅವರು ಕುಸಿದು ಬಿದ್ದಿದ್ದಾರೆ. ಹಾಗೂ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಜೆರಿ ಮಂಗಳೂರು ಹಾಗೂ ಮುಂಬೈಗಳಲ್ಲಿ ಸಂಗೀತ ಸಂಜೆಯನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ಇನ್ನು ೬೦ಕ್ಕೂ ಅಧಿಕ ಗೀತೆಗಳನ್ನು ಇವರು ರಚಿಸಿದ್ದಾರೆ. ‘ನಾಚ್ ಬಂಗರ’ ಎನ್ನುವ ಮ್ಯೂಸಿಕ್ ಅಲ್ಬಮ್ ಇದರ ಕೊಡುಗೆಯಾಗಿದೆ.