ನವದೆಹಲಿ: ಕಳೆದ ಸೆಪ್ಟೆಂಬರ್ ನಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರರನ್ನು ಹತ್ಯೆಗೈದಿದ್ದ ಭಾರತೀಯ ಸೇನೆ, ಮತ್ತೊಮ್ಮೆ ಪಾಕ್ ಗಡಿಯೊಳಗೆ ನುಗ್ಗಿ ಪಾಕಿಸ್ತಾನಿ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ವಾಪಸ್ ಬಂದಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.ಕಳೆದ ಶನಿವಾರ ಪಾಕ್ ಸೇನೆ ಗಡಿ ಕದನ ವಿರಾಮ ಉಲ್ಲಂಘನೆ ಮಾಡಿ ನಾಲ್ವರು ಭಾರತೀಯ ಯೋಧರನ್ನು ಕೊಂದದ್ದಕ್ಕೆ ಸೇಡು ತೀರಿಸಲು ಭಾರತೀಯ ಸೇನಾ ಪಡೆ ಡಿ 25 ರ ಸೋಮವಾರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮೂವರು ಪಾಕ್ ಸೈನಿಕರನ್ನು ಹತ್ಯೆಗೈದಿತು. ಇತ್ತೀಚೆಗೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೈನಿಕರು ಭಾರತೀಯ ಪೋಸ್ಚ್ ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿನಡೆಸಿದ್ದರು. ಭಾರತೀಯ ಸೇನಾ ಮೇಜರ್ ಸಹಿತ ನಾಲ್ಕು ಯೋಧರು ಪಾಕ್ ಗುಂಡಿನ ಮತ್ತು ಶೆಲ್ ದಾಳಿಗೆ ಹುತಾತ್ಮರಾಗಿದ್ದರು. ಯೋಧರನ್ನು ಕೊಂದದ್ದಕ್ಕೆ ಸೇಡು ತೀರಿಸಲು ಭಾರತೀಯ ಸೇನಾ ಪಡೆ ಸೈನಿಕರನ್ನು ಕೊಂದು ವಾಪಸ್ ಬಂದಿದೆ.
ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವಂತೆ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ ರಾಖಿಕ್ರಿ, ರಾವಲ್ ಕೋಟ್ ಸೆಕ್ಟರ್ ನಲ್ಲಿ ಪಾಕಿಸ್ತಾನಿ ಸೇನಾ ಕ್ಯಾಂಪ್ ಗಳ ಮೇಲೆ ಭಾರತೀಯ ಪಡೆಗಳು ದಾಳಿ ಮಾಡಿದ್ದು ಈ ವೇಳೆ ಮೂವರು ಪಾಕಿಸ್ತಾನಿ ಯೋಧರನ್ನು ಸದೆ ಬಡಿದಿದೆಎಂದು ಎಎನ್ಐ ವರದಿ ಮಾಡಿದೆ. ಆದರೂ ಸೇನಾ ಮೂಲಗಳು ಈ ಘಟನೆ ಬಗ್ಗೆ ಅಧಿಕೃತ ದೃಢೀಕರಣ ಮಾಡಿಲ್ಲ.