ಉಡುಪಿ, ಸೆ 05 (Daijiworld News/MSP): ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಬಂದ್ ಹಾಗೂ ಪ್ರತಿಭಟನೆ ನಡೆಸುತ್ತಿದ್ದು ಅವರ ಬಂಧನಕ್ಕಾಗಿ ಕಾಂಗ್ರೆಸ್ಸಿಗರು ಪ್ರತಿಭಟಿಸಲು ನಾಚಿಕೆ ಆಗುವುದಿಲ್ಲವೇ ? ಎಂದು ಉಡುಪಿ ಶಾಸಕ ರಘುಪತಿ ಭಟ್ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ , "ದೇಶದ ಯೋಧರ ಬಲಿದಾನವಾದಾಗ, ಸಾಲು ಸಾಲು ರೈತರು ರೈತರು ನಿಮ್ಮದೇ ಅಧಿಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ, ಭಾರತದ ವಿರುದ್ಧ ಕೆಲ ದ್ರೋಹಿಗಳು ಕೃತ್ಯಗಳನ್ನು ನಡೆಸಿದಾಗ ಬೀದಿಗಿಳಿದು ಪ್ರತಿಭಟಿಸದ ನೀವು ನಿಮ್ಮ ಸರ್ಕಾರ ಭ್ರಷ್ಟ ಮುಖಂಡ ಅರೆಸ್ಟ್ ಆದಾಗ ಪ್ರತಿಭಟಿಸುತ್ತೀರಲ್ವಾ ನಿಮಗೆ ನಾಚಿಕೆ ಆಗೋಲ್ವಾ ಎಂದು ಪ್ರಶ್ನಿಸಿದ ಅವರು , ಉಪ್ಪು ತಿಂದವರು ನೀರು ಕುಡಿಯಲೇಬೇಕು " ಎಂದು ವ್ಯಂಗ್ಯವಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ವಶಕ್ಕೆ ಪಡೆದಿತ್ತು. ಮಂಗಳವಾರ ರಾತ್ರಿ ಇ.ಡಿ ಬಂಧನಕ್ಕೆ ಒಳಗಾಗಿದ್ದ ಡಿ.ಕೆ ಶಿವಕುಮಾರ್ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುದೀರ್ಘ ವಾದ ವಿವಾದಗಳ ನಂತರ ಡಿಕೆಶಿ ಅವರನ್ನು ಸೆ.13ರ ವರೆಗೆ ಇ.ಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿತು. ಈ ಸಂದರ್ಭ ದ್ವೇಷದ ರಾಜಕಾರಣವು ಈ ದೇಶದ ಕಾನೂನಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದುಡಿ.ಕೆ ಶಿವಕುಮಾರ್ ಹೇಳಿದ್ದರು.