ಬೆಂಗಳೂರು, ಸೆ 14: ಎಂ ಬಿ ಪಾಟೀಲ್ ಅವರು ಸಿದ್ಧಗಂಗಾ ಶ್ರೀಗಳನ್ನು ಪ್ರತ್ಯೇಕ ಲಿಂಗಾಯುತ ಮತ್ತು ವೀರಶೈವ ಧರ್ಮದ ವಿಚಾರವಾಗಿ ಎಳೆದು ತಂದಿದ್ದರು. ಮಾತ್ರವಲ್ಲದೇ, ಎಂ ಬಿ ಪಾಟೀಲ್ ಅವರು ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಸ್ವೇಚ್ಛಾಚಾರದ ಎಡವಟ್ಟು ಹೇಳಿಕೆಗಳನ್ನು ಕೂಡ ನೀಡುತ್ತಿದ್ದರು. ಇದರಿಂದ ಸಿಎಂ ಸಿದ್ದರಾಮಯ್ಯ ಸಚಿವ ಎಂಬಿ ಪಾಟೀಲರ ವಿರುದ್ಧ ಗರಂ ಆಗಿದ್ದಾರೆ.
ಬಾಯಿಗೆ ಬಂದ ಹಾಗೆ ಮಾತಾಡಿ ಪ್ರತ್ಯೇಕ ಲಿಂಗಾಯುತ ಮತ್ತು ವೀರಶೈವ ಧರ್ಮದ ವಿಚಾರವಾಗಿ ಸಮರ್ಥನೆ ಮಾಡುವುದರಿಂದ ಸರ್ಕಾರಕ್ಕೆ ಅವಮಾನವಾಗಿದೆ ಎಂದು ಆಕ್ರೋಶಿತಗೊಂಡಿದ್ದಲ್ಲದೇ ಲಿಂಗಾಯತ ಧರ್ಮ ವಿಚಾರದಲ್ಲಿ ಯಾಕೆ ಬಾಲಿಶವಾಗಿ ವರ್ತಿಸುತ್ತಿದ್ದೀರಿ ಎಂದು ಎಂಬಿ ಪಾಟೀಲರಿಗೆ ಸಿಎಂ ಬಿಸಿ ಮುಟ್ಟಿಸಿದ್ದಾರೆ.