ಕೋಟ, ಸೆ 07 (Daijiworld News/MSP): ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಶುಕ್ರವಾರ ಸಾಸ್ತಾನ ಟೋಲ್ ಗೇಟ್ ಬಳಿ ತೆರಳಿ ರಾಷ್ಟ್ರೀಯ ಹೆದ್ದಾರಿ ಉಡುಪಿಯಿಂದ ಕುಂದಾಪುರವರೆಗಿನ ಅಸಮರ್ಪಕ ಕಾಮಗಾರಿ ,ರಸ್ತೆಗಳ ಹೊಂಡಗಳಿಂದಾಗುವ ಅನಾಹುತ ಹಾಗೂ ವಿವಿಧ ಬೇಡಿಕೆಯಾದ ಟೋಲ್ ಗೇಟ್ ಬಳಿ ಅಡ್ಡಲಾಗಿ ನಿಲ್ಲುವ ಘನ ವಾಹನಗಳ ತೆರವು ,ಹೆದ್ದಾರಿ ಹೈಮಾಸ್ಟ್ ದೀಪದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಟೋಲ್ ಗೇಟ್ ಬಳಿ ತೆರಳಿ ನವಯುಗ ಕಂಪನಿಯ ಟೋಲ್ ವ್ಯವಸ್ಥಾಪಕರಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಇತ್ತೀಚಿಗಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಸ್ತೆಗಳ ಹೊಂಡಗಳ ಕೇಳುವರಿಲ್ಲದಾಗಿದೆ,ಟೋಲ್ ಗೇಟ್ ಬಳಿ ಬೃಹತ್ ಲಾರಿಗಳು ನೆಲೆಯೂರುತ್ತಿವೆ,ದಾರಿದೀಪಗಳು ಉರಿಯುವುದಿಲ್ಲ,ಟೋಲ್ ಗೇಟ್ ಬಳಿಯೇ ಆರ್ ಟಿ ಓ ಗಾಡಿ ನಿಲ್ಲುತ್ತದೆ. ಇವೆಲ್ಲವುದರಿಂದ ಅಪಘಾತಗಳ ವಿಪರೀತವಾಗಿದೆ. ಹಾಗಾದರೆ ಮನುಷ್ಯ ಜೀವಕ್ಕೆ ಬೆಲೆಯೇ ಇಲ್ಲವಾ,ಪ್ರತಿಯೊಂದಕ್ಕೂ ಕಾನೂನು ರಚಿಸುತ್ತಾರೆ ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಎಂದು ಮುಕ್ತಿ, ಬಗೆಹರಿಸುವವರು ನಿಮ್ಮಲ್ಲಿಲ್ಲವಾ ಎಂದು ನವಯುಗ ಕಂಪನಿಯ ಟೋಲ್ ಉಸ್ತುವಾರಿ ಕೇಶವಮೂರ್ತಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ರೀತಿ ಮುಂದುವರಿದರೆ ಪರಿಣಾಮ ನೆಟ್ಟಗಿರಲ್ಲ ಇನ್ನೊಮ್ಮೆ ನಾವು ಪ್ರತಿಭಟನೆಗೆ ಇಳಿದರೆ ಅದರ ದುಷ್ಪರಿಣಾಮ ನೀವೆ ನೋಡಬೇಕಾದಿತು ಎಂದು ಗುಡುಗಿದರು. ಇದನ್ನು ಮನಗಂಡ ಕೇಶವಮೂರ್ತಿ ಹಂತಹಂತವಾಗಿ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿಸಲಾಗುವುದು ಎಂದು ಹೇಳಿದರು. ಇದಕ್ಕೊಪದ ಜಾಗೃತಿ ಸಮಿತಿಯವರು ಇದಲ್ಲ ಸಾಧ್ಯವಿಲ್ಲ ಇನ್ನು ಒಂದು ವಾರದಲ್ಲಿ ಈ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದು ಗಡುವು ನೀಡಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಐರೋಡಿ ವಿಠಲ್ ಪೂಜಾರಿ,ಪ್ರಶಾಂತ್ ಶೆಟ್ಟಿ, ಶ್ಯಾಮಸುಂದರ ನಾಯಿರಿ,ಅಲ್ವಿನ್ ಅಂದ್ರೆ,ದಿನೇಶ್ ಗಾಣಿಗ,ಸಂದೀಪ್ ಕುಂದರ್,ನಾಗರಾಜ್ ಗಾಣಿಗ,ನಾಗರಾಜ್ ಪುತ್ರನ್,ಗೋವಿಂದ ಪೂಜಾರಿ,ಸಹದೇವ ಪೂಜಾರಿ,ರಾಘವೇಂದ್ರ ಕುಂದರ್ ಗಿಳಿಯಾರು,ಸುರೇಶ್ ಗಿಳಿಯಾರು,ಶಿವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಆಂಬ್ಯುಲೆನ್ಸ್ ಗೋಳು ಕೇಳುವರಿಲ್ಲ ಎಂಬ ಕೂಗು
ಜೀವನ್ ಮಿತ್ರ ಆಂಬ್ಯುಲೆನ್ಸ್ ನಾಗರಾಜ್ ಪುತ್ರನ್ ಮಾತನಾಡಿ ಟೋಲ್ ಬಳಿ ತುರ್ತು ನಿರ್ಗಮಿಸಲು ವ್ಯವಸ್ಥೆ ಗಳಿಲ್ಲ ದಾರಿಯಲ್ಲ ಹಂಪ್ ಅಳವಡಿಸಿದ್ದಾರೆ,ತುರ್ತು ನಿರ್ಗಮಿಸಲು ಅಡ್ಡ ಪೈಪ್ ಅಳವಡಿದ್ದಾರೆ. ಆಂಬ್ಯುಲೆನ್ಸ್ ಬಂದಿದ್ದು ಗೊತ್ತಾಗದ ರೀತಿಯಲ್ಲಿ ಇಲ್ಲಿನ ಸಿಬ್ಬಂದಿ ವ್ಯವಹರಿಸುತ್ತಾರೆ.