ಸುಳ್ಯ, ಸೆ 07 (Daijiworld News/MSP): "ರಾಜಕೀಯ ವೈಷಮ್ಯದಿಂದಲೇ ನಮ್ಮ ನಾಯಕರಾಗಿರುವ ಡಿ.ಕೆ.ಶಿವಕುಮಾರ್ರನ್ನು ಬಂಧಿಸಲಾಗಿದೆ" ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.
ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಮುಖಾಂತರ ಬಂಧಿಸಿರುವುದನ್ನು ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಡಿ.ಕೆ.ಶಿ.ಯವರ ಬಂಧನದ ನಂತರ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರವರು ಗುಜರಾತ್ನಲ್ಲಿ ಶಾಸಕರ ರಕ್ಷಣೆ ಯಾಕೆ ಮಾಡಬೇಕಿತ್ತು ಎಂಬ ಹೇಳಿಕೆ ನೀಡುತ್ತಾರೆಂದರೆ ದ್ವೇಷದಿಂದಲೇ ಬಿಜೆಪಿ ಸರಕಾರ ಈ ರೀತಿ ಮಾಡುತ್ತಿದೆ ಎಂದು ಹೇಳಿದರು. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗುತ್ತದೆ. ಹಣ ಇತ್ತೆಂಬ ಕಾರಣ ನೀಡಿ ಬಂಧಿಸುತ್ತಾರಾದರೆ ಬಿಜೆಪಿಯ ಜನಾರ್ದನ ರೆಡ್ಡಿ 500 ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಆ ದುಡ್ಡು ಎಲ್ಲಿಂದ ಬಂತೆಂಬ ತನಿಖೆ ಯಾಕೆ ಮಾಡುತ್ತಿಲ್ಲ ಎಂದು ಹೇಳಿದರಲ್ಲದೆ, “ಡಿ.ಕೆ. ಶಿವಕುಮಾರ್ ಅಪರಾಧ ಮುಕ್ತವಾಗಿ ಹೊರ ಬರುತ್ತಾರೆ“ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಎಂ.ವೆಂಕಪ್ಪ ಗೌಡ ಮಾತನಾಡಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಹಾಗು ದೇಶದ, ರಾಜ್ಯದ ಪ್ರಭಾವಿ ನಾಯಕ. ಅವರನ್ನು ಬಂಧಿಸುವ ಮೂಲಕ ಸಮುದಾಯಕ್ಕೆ ಬಿಜೆಪಿ ಕಳಂಕ ಉಂಟುಮಾಡಿದೆ “ಸುಳ್ಯಕ್ಕೂ ಡಿ.ಕೆ.ಶಿವಕುಮಾರ್ರಿಗೂ ಅವಿನಾಭಾವ ಸಂಬಂಧವಿದೆ. ನಮ್ಮ ಗೌಡ ಭವನಕ್ಕೆ ಎರಡನೇ ಬಾರಿ ಅನುದಾನ ಕೊಡಿಸಿದ್ದರೆ ಎಂದು ಅವರು ಹೇಳಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಮಾಜಿ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಮಾಜಿ ನ.ಪಂ. ಸದಸ್ಯ ಮುಸ್ತಫಾ ಮಾತನಾಡಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್, ಕಾಂಗ್ರೆಸ್ ಮುಖಂಡರಾದ ಬೆಟ್ಟ ರಾಜಾರಾಮ ಭಟ್ ಸುದೀರ್ ರೈ ಮೇನಾಲ, ಚಂದ್ರಶೇಖರ ಕಾಮತ್, ಬಾಲಕೃಷ್ಣ ಭಟ್, ಡೇವಿಡ್ ರಿಚರ್ಡ್ ಕ್ರಾಸ್ತಾ, ಪವಾಝ್ ಕನಕಮಜಲು, ಕಳಂಜ ವಿಶ್ವನಾಥ ರೈ, ಪಿ.ಸಿ.ಜಯರಾಂ, ಬೀರಾಮೊಯಿದ್ದೀನ್, ಅಬ್ದುಲ್ ಗಫೂರ್, ಪಿ.ಎಸ್. ಗಂಗಾಧರ್, ಅಶೋಕ್ ನೆಕ್ರಾಜೆ, ಪಿ.ಎ.ಮಹಮ್ಮದ್, ಪರಶುರಾಮ ಚಿಲ್ತಡ್ಕ, ಎಂ.ಮಾಧವ ಗೌಡ, ನಂದರಾಜ್ ಸಂಕೇಶ, ಸತೀಶ್ ಕೂಜುಗೋಡು, ದಿನೇಶ್ ಸರಸ್ವತಿಮಹಲ್, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ರಾಧಾಕೃಷ್ಣ ಪರಿವಾರಕಾನ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಲೀಲಾಮನಮೋಹನ್ ಮೊದಲಾದವರು ಭಾಗವಹಿಸಿದ್ದರು.