ಬಂಟ್ವಾಳ, ಜು. 02 (DaijiworldNews/TA): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ. ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ ಸೀತಾ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ.




ಅದೇ ರೀತಿ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಚಂದ್ರಶೇಖರ ಅವರ ಮನೆಗೂ ಮರ ಬಿದ್ದು ಹಾನಿಯಾಗಿದ್ದು, ಮನೆ ವಾಸಕ್ಕೆ ಅಯೋಗ್ಯಗೊಂಡ ಹಿನ್ನೆಲೆಯಲ್ಲಿ ಅವರು ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೊಂದೆಡೆ, ವಿಟ್ಲ ಕಸಬಾ ಗ್ರಾಮದ ಅಲಂಗಾರು ನಿವಾಸಿ ವನಜಾ ಅವರ ಮನೆಯೂ ಮಳೆಯಿಂದ ಹಾನಿಗೊಳಗಾಗಿದೆ.