ಸುಳ್ಯ, ಜು. 02 (DaijiworldNews/TA): ತಾಲೂಕಿನ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಕೃಷಿಕರೊಬ್ಬರ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿ ಅಪಾರ ಕೃಷಿ ನಾಶ ಮಾಡಿದ ಘಟನೆ ನಡೆದಿದೆ.

ತೋಟಕ್ಕೆ ನುಗ್ಗಿ ಕಾಡಾನೆಗಳು ಬಾಳೆ ಸೇರಿದಂತೆ ಇತರ ಕೃಷಿ ಬೆಳೆಗಳನ್ನು ನಾಶ ಮಾಡಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಡಾನೆಗಳು ತೋಟಕ್ಕೆ ನುಗ್ಗಿರುವುದು ಮನೆಯವರಿಗೆ ಗೊತ್ತಾಗಿಲ್ಲ. ಇದು ಆನೆಗಳು ಇನ್ನಷ್ಟು ಬೆಳೆ ನಾಶ ಮಾಡಲು ಕಾರಣವಾಯಿತು ಎನ್ನಲಾಗಿದೆ.