ಮಂಗಳೂರು, ಜು. 07 (DaijiworldNews/TA): ಬಡ ಕುಟುಂಬಗಳಿಗೆ ಉಚಿತ ಔಷಧ ನೀಡುವ ಮೂಲಕ ಜನಪ್ರಿಯರಾಗಿದ್ದ ಪದವಿನಂಗಡಿಯ ವೈದ್ಯ ಡಾ.ಭರತ್ ಕುಮಾರ್ ಎಂ ಸೋಮವಾರ (ಜು.06) ಬೆಳಗ್ಗೆ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.

ಹಲವು ದಶಕಗಳಿಂದ ಬಡ ಕುಟುಂಬಗಳಿಗೆ ನಿಸ್ವಾರ್ಥ ವೈದ್ಯಕೀಯ ಸೇವೆ ನೀಡುವ ಮೂಲಕ ಜನಾನುರಾಗಿಯಾಗಿದ್ದರು. ಪದವಿನಂಗಡಿಯಲ್ಲಿ ಕ್ಲಿನಿಕ್ ಹೊಂದಿದ್ದ ಡಾ.ಭರತ್ ಅವರು 3 ದಶಕಗಳಿಗೂ ಹೆಚ್ಚು ಕಾಲ ಜನಸ್ನೇಹಿ ವೈದ್ಯರಾಗಿ ಸೇವೆ ನೀಡಿದ್ದರು.
ಪದವಿನಂಗಡಿ ಸೇರಿದಂತೆ ಕೊಂಚಾಡಿ, ಪಚ್ಚನಾಡಿ, ಬೊಂದೇಲ್, ಕಾವೂರು, ದೇರೆಬೈಲ್ ಸೇರಿದಂತೆ ಮಂಗಳೂರಿನ ಹಲವೆಡೆ ಜನರಿಗೆ ವೈದ್ಯ ಸೇವೆ ನೀಡುವ ಮೂಲಕ ಜನಸ್ನೇಹಿ ವೈದ್ಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು.