ಮಂಗಳೂರು,ಸೆ 08 (Daijiworld News/RD): ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಗೆ ಒತ್ತಾಯಿಸಿ ತುಳು ಸಂಘಟನೆಗಳು ಇಂದಿನಿಂದ ಟ್ವೀಟರ್ ನಲ್ಲಿ ಟ್ವೀಟ್ ಅಭಿಯಾನವನ್ನು ಹಮ್ಮಿಕೊಂಡಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಈಗಾಗಲೇ ಈ ಟ್ವೀಟ್ ಅಭಿಯಾನಕ್ಕೆ, ತುಳುನಾಡಿನ ಜನರು ಟ್ವೀಟರ್ ನಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಹ್ಯಾಸ್ ಟ್ಯಾಗ್ #TuluOfficialinKA_KL ಹಾಗೂ ಟ್ವೀಟರ್ ಐಡಿ @jaitulunadorg ಆಗಿದ್ದು ಸಾಮಾಜಿಕ ಜಾಲಾತಾಣದಲ್ಲಿ ಇದೀಗ ತುಳು ಪರ ಹೋರಾಟ ನಡೆಯುತ್ತಿದೆ.
ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು ತುಳುನಾಡಿನ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಅಭಿಯಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಮೂಲಕ ಸಾಮಜಿಕ ಜಾಲಾತಾಣಗಳಗಳಲ್ಲಿ ಹೊಸ ಅಧ್ಯಾಯ ಆರಂಭಿಸುವಲ್ಲಿ ತುಳು ಸಂಘಟನೆಗಳು ಪಣತೊಟ್ಟಿವೆ. ಈಗಾಗಲೇ ಒಂದು ಲಕ್ಷ ಜನ ತಮ್ಮ ಟ್ವೀಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಉಡುಪಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿ ಹ್ಯಾಶ್ ಟ್ಯಾಗ್ ಮಾಡುವುದರೊಂದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡಿ, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಸಾಂಸ್ಕೃತಿಕ ಹಕ್ಕಿನ ಪ್ರಕಾರ ಪ್ರತಿಯೊಂದು ಜನಾಂಗಕ್ಕೂ ತಮ್ಮ ಭಾಷೆ,ಸಂಸ್ಕೃತಿ,ಲಿಪಿ ಇವುಗಳನ್ನು ರಕ್ಷಿಸುವ ಹಕ್ಕಿದೆ,ಇದರಂತೆ ಪ್ರತಿ ಭಾರಿಯೂ ನಮ್ಮ ಮಾತೃ ಭಾಷೆ ತುಳುವಿಗೆ ಸಾಂವಿಧಾನಿಕ ಚೌಕಟ್ಟು ಒದಗಿಸಲು ಏಕೆ ಸರ್ಕಾರಗಳು ಹಿಂದೇಟು ಹಾಕುತ್ತಿವೆ?!! ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ನಮ್ಮ ತುಳುವರ ಕೊಡುಗೆ ಅಪಾರ ಇದೆ.ನಮ್ಮ ತುಳು ನಾಡಿನ ಆಚರಣೆಗಳು ಇಂದು ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿರುವಾಗ ನಮ್ಮ ಭಾಷೆಗೆ ಅಳುವ ಸರ್ಕಾರಗಳು ಪ್ರಾಧಾನ್ಯತೆ ನೀಡಲೇಬೇಕಿದೆ. ಇನ್ನೊಂದು ಭಾಷೆಯ ಪ್ರಾಧಾನ್ಯತೆಯನ್ನು ಕಿತ್ತು ನಮ್ಮ ಭಾಷೆಗೆ ಪ್ರಾಧಾನ್ಯತೆ ನೀಡಿ ಎಂದು ನಾವು ಆಗ್ರಹಿಸುತ್ತಿಲ್ಲ ಬದಲಾಗಿ ನಮ್ಮ ಭಾಷೆಗೆ ನ್ಯಾಯಯುತವಾದ ಸಿಗಬೇಕಾದ ನ್ಯಾಯವನ್ನು ಒದಗಿಸಿ. ನಮ್ಮ ದೇಶದ ಚರಿತ್ರೆಯಲ್ಲೇ ಪಂಚ ದ್ರಾವಿಡ ಭಾಷೆಯಲ್ಲಿ ಸ್ಥಾನ ಮಾನ ಪಡೆದ ನಮ್ಮ ತುಳು ಭಾಷೆಯ ಕುರಿತ ಪೂರ್ವಗ್ರಹದಿಂದ ಹೊರಬನ್ನಿ ಎಂದು ತುಳುನಾಡಿನ ಜನರು ತಮ್ಮ ಭಾಷಾಭಿಮಾನವನ್ನು ವ್ಯಕ್ತಪಡಿಸಿದ್ದು, ಈ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
’ವಿದೇಶದಲ್ಲಿ ವರ್ಷಕ್ಕೊಮ್ಮೆ ತುಳು ಭಾಷಾ ಸಪ್ತಾಹ ನಡೆಯುತ್ತಿರುವಾಗ ನಮ್ಮ ದೇಶ ಬಿಡಿ ರಾಜ್ಯದಲ್ಲೂ ಅಂತಹ ಪ್ರಾಧಾನ್ಯತೆ ತುಳುವಿಗಿಲ್ಲ ಯಾಕೆ?’ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ’ಪಿರಾಕ್ ದ ಸರ್ಕಾರ ಇಪ್ಪುನಗ ನಿಕುಲು ವಿಧಾನಸಭೆಟ್ ಸೊರ ದೆರ್ಪುಬ ಪಂದ್ ಪನೋಂದು ಇತ್ತರ್. ಇತ್ತೇ ನಿಗುಲ್ನನೆ ಸರ್ಕಾರ ಉಂಡು. ತುಳುತ ಮಾನದಿಗೆಗ್ ನಿಕುಲೆಗ್ ಪೊರ್ಲುತ ಅವಕಾಶ ಉಂಡು. ಅಪ್ಪೆಗ್ ಮಾನದಿಗೆ ಕೊರ್ಪಲೆ ಎಂದು ಶಾಸಕರಿಗೆ ಸವಾಲು ಹಾಕಿದ್ದಾರೆ. ತುಳುವಿನಲ್ಲಿರುವ ಅತ್ಯಂತ ಹಳೆಯ ಶಾಸನಗಳು 14 ರಿಂದ 15 ನೇ ಶತಮಾನಕ್ಕೆ ಸೇರಿದವು. ಆದರೂ ಭಾಷೆಯನ್ನು ಅಧಿಕೃತಗೊಳಿಸಲಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ. ತುಳು ಎಂದರೆ ಕೇವಲ ಬಾಷೆ ಅಲ್ಲ ಅಂದೊಂದು ಸುಂದರ ಸಂಸ್ಕ್ರತಿ ಯೂ ಹೌದು ಅಳಿಯಲು ಬಿಡಬೇಡಿ ಸ್ಥಾನಮಾನ ನೀಡಿ ಸಂಸ್ಕ್ರತಿ ಯೂ ಹೌದು ಅಳಿಯಲು ಬಿಡಬೇಡಿ ಸ್ಥಾನಮಾನ ನೀಡಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
2002 ರಿಂದ 14 ಭಾಷೆಗಳು ಕೇಂದ್ರ ಸರ್ಕಾರಕ್ಕೆ ಇದೇ ರೀತಿಯ ಬೇಡಿಕೆ ಇಟ್ಟಿದ್ದು,ಇದಕ್ಕಾಗಿ ಕೇಂದ್ರ ಸರ್ಕಾರ ಸಮಿತಿ ರಚಿಸಿ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಯ ಕೆಲವು ನಿಯಮಾವಳಿಗಳಿಗೆ ಬದಲಾವಣೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಈಗ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಗೆ ಮೊದಲು ರಾಜ್ಯದ ಅಧಿಕೃತ ಭಾಷೆ ಎಂಬ ಮಾನ್ಯತೆಯನ್ನು ತುಳು ಭಾಷೆ ಪಡೆಯಬೇಕಾಗಿದೆ. ತುಳು ಭಾಷೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಅಂದಿನಿಂದ ನಡೆಯುತ್ತಾ ಬಂದಿದ್ದು, ಇನ್ನು ೨೦೧೮ರಂದು ತುಳು ಭಾಷೆ ಸಂವಿಧಾನದಲ್ಲಿ ಸೇರ್ಪಡೆ ಕುರಿತಂತೆ ಟ್ವೀಟ್ ಅಭಿಯಾನ ನಡೆದಿತ್ತು. ಈ ಅಭಿಯಾನದಲ್ಲಿ 52,600 ಮಂದಿ ಪಾಲ್ಗೊಂಡಿದ್ದರು.