ಮಂಗಳೂರು,ಸೆ 08 (Daijiworld News/RD): ದೇಶದ ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು, ಅವರಿಗೆ ಅಲ್ಲಿ ಗೆಲ್ಲಲು ಭಾರತವನ್ನು ಬೈಯ್ಯುತ್ತಾರೆ ಇವರು ಇಲ್ಲಿ ಗೆಲ್ಲಲು ಪಾಕಿಸ್ತಾನವನ್ನ ಬೈಯುತ್ತಾರೆ ಈ ಇಬ್ಬರು ಕೂಡ ಒಂದೇ ರೀತಿಯ ಜನರು ಅವನು ಹೇಗೋ ಸರಿಯಲ್ಲ, ಇವರು ಕೂಡ ಅದೇ ದಾರಿಯಲ್ಲಿ ಇದ್ದಾರೆ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸಿಕಾಂತ್ ಸೆಂಥಿಲ್ ಅವರಿಗೆ ದೇಶದ ಆಡಳಿತ ಯಂತ್ರದ ಬಗ್ಗೆ ಅಸಮಾಧಾನವಿದೆ. ಸೆಂಥಿಲ್ ಒಬ್ಬ ಪ್ರಾಮಾಣಿಕ ಮತ್ತು ಜನಪರ ಜಿಲ್ಲಾಧಿಕಾರಿ ಸೆಂಥಿಲ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಡಿ.ಕೆ.ರವಿ ಆತ್ಮಹತ್ಯೆ ಆದಾಗ ರಾಜಕೀಯ ಮಾಡಿದ್ದು ಬಿಜೆಪಿ, ಸಾವಿನಲ್ಲಿ ಕೀಳು ಮಟ್ಟದ ರಾಜಕೀಯ ಈ ಜಿಲ್ಲೆಯಲ್ಲಿ ಮಾಡಿದ್ದು ಬಿಜೆಪಿ ಪಕ್ಷ. ನಾವು ಉತ್ತಮ ಅಧಿಕಾರಿ ಸೆಂಥಿಲ್ ಇರಬೇಕು ಅಂತ ಪ್ರತಿಭಟನೆ ಮಾಡಿದ್ದೇವೆ.
ಇನ್ನು ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಡಿಸಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಸೆಂಥಿಲ್ ಪ್ರಾಮಾಣಿಕತೆ ಬಗ್ಗೆ ಈವರೆಗೆ ಯಾರೂ ಮಾತನಾಡಿಲ್ಲ ಆದ್ರೆ ಇನ್ನು ಕೇಂದ್ರ ಸರ್ಕಾರದ ವಿರುದ್ದ ಮಾತನಾಡಿದ್ದಕ್ಕೆ ಇಂಥ ಕುಕೃತ್ಯ ಶುರುವಾಗುತ್ತದೆ. ಲಾರಿ ಮಾಲಕರ ಸಂಘ ಸೇರಿ ಬೇರೆ ರೀತಿಯಲ್ಲಿ ಆರೋಪಕ್ಕೆ ಸಂಘಟನೆಗಳನ್ನ ಬಳಸಲಾಗುತ್ತದೆ ಈಗಾಗಲೇ ಸಸಿಕಾಂತ್ ಸೆಂಥಿಲ್ ಭ್ರಷ್ಟ ಜಿಲ್ಲಾಧಿಕಾರಿ ಎಂಬ ಪಟ್ಟವನ್ನು ಕಟ್ಟುತ್ತಿದ್ದು, ನಾವು ಈ ಮಾತನ್ನು ಒಪ್ಪಲ್ಲ, ಇದು ನಿರಾಧಾರ ಮೊನ್ನೆಯವರೆಗೆ ಬಿಜೆಪಿ ಮುಖಂಡರು ಕೂಡ ಸೆಂಥಿಲ್ ಒಳ್ಳೆಯ ಅಧಿಕಾರಿ ಅಂದಿದ್ದಾರೆ ಈಗ ಅವರನ್ನ ತಪ್ಪಿತಸ್ಥರು ಮಾಡುವ ಕೆಲಸ ನಡೆಯುತ್ತಿದೆ ಎಂದರು.