ಮಂಗಳೂರು,ಸೆ 09 (Daijiworld News/RD): ಬಸ್ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಸಿ ಸಂಚಾರಿ ನಿಯಮ ಉಲ್ಲಂಘಿಸಿದ ಖಾಸಗಿ ಬಸ್ ಚಾಲಕನಿಗೆ ಸಂಚಾರಿ ಪೊಲೀಸರು 5,000 ರೂ ದಂಡ ವಿಧಿಸಿದ್ದಾರೆ.
ಈಗಾಗಲೆ ಮಂಗಳೂರು ನಗರದಲ್ಲಿ ನೂತನ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಶನಿವಾರದಿಂದ ಜಾರಿಗೊಂಡಿದ್ದು, ನಗರದೆಲ್ಲೆಡೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದಾರೆ.
ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಶನಿವಾರ ಸಂಜೆ 7 ಗಂಟೆ ಸುಮಾರು ಜೋಕಟ್ಟೆ ಕ್ರಾಸ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ಬಸ್ ಚಲಾಯಿಸುತ್ತಿದ್ದ ಚಾಲಕನು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ, ಈ ವೇಳೆ ಬಸ್ ನಿಲ್ಲಿಸಲು ಸೂಚಿಸಿದ ಪೊಲೀಸರು ಚಾಲಕನಿಂದ ಭಾರೀ ದಂಡ ವಸೂಲಿ ಮಾಡಿದ್ದಾರೆ.