ಕುಂದಾಪುರ,ಸೆ 09 (Daijiworld News/RD): ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ಭಾನುವಾರ ಕುಂದಾಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣವಾಗಿದೆ.
ಹನೀಫ್ ಜತೆ ತನಗೆ ಈ ವರ್ಷದ ಜು. 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾದ ಅಲ್ಫಿಯಾ ಅಖ್ತರ್ (29). ಪತಿ ಮನೆಯವರು 5 ಲ. ರೂ. ವರದಕ್ಷಿಣೆ ಕೇಳಿದ್ದರು, ನಾವು 2 ಲ. ರೂ. ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿರುವುದಾಗಿ ಅಲ್ಫಿಯಾ ದೂರಿನಲ್ಲಿ ತಿಳಿಸಿದ್ದಾರೆ.
ಅವರು ಹಿರಿಯಡಕ ನಿವಾಸಿಗಳಾದ ಹನೀಫ್ ಸಯ್ಯದ್ (32), ಆತನ ತಂದೆ ಅಬ್ಟಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಅಕ್ಕನ ಆಯೇಷಾ ವಿರುದ್ಧ ವಿರುದ್ಧ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಸೆಕ್ಷನ್ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯಿದೆ ಹಕ್ಕಿನಡಿ ಕೇಸು ದಾಖಲಾಗಿದೆ. ಜತೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಹೇರಲಾಗಿದೆ.