ಕುಂದಾಪುರ,ಸೆ 09 (Daijiworld News/RD): ಮನೆಯಿಂದ ತೆರಳಿದ ಮಹಿಳೆಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ವಿಠಲ್ ಕುಲಾಲ್ ಅವರ ಸಹೋದರಿ ಕನಕ ಎನ್ನುವವರು ಕಳೆದ ರಾತ್ರಿ ಮನೆಯಿಂದ ಹೊರಗೆ ಹೋದವರು ಇನ್ನು ಕೂಡಾ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಮನೆಯವರು ಸದ್ಯ ಹೆಸ್ಕುತ್ತೂರು ಹೊಳೆಯಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಕಂಡ್ಲೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಸ್ಕುತ್ತೂರು ಹೊಳೆಯ ಸುತ್ತ ಮುತ್ತ ಸ್ಥಳೀಯ ಜನರು ನೆರೆದಿದ್ದು ಹೊಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಶೋಧ ಕಾರ್ಯವನ್ನು ಚರುಕುಗೊಳಿಸಿ ಸಂಬಂಧ ಪಟ್ಟ ಮಾಹಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.