ಡಿ 27: ಬೇಹುಗಾರಿಕೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಹೋಗಿದ್ದ ತಾಯಿ ಮತ್ತು ಪತ್ನಿ ಮಾಂಗಲ್ಯ ತೆಗೆಸಿ ಕುಂಕುಮ ಅಳಿಸಿ ಅವಮಾನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಾಧವ್ ಭೇಟಿಗೆ ತೆರಳಿದ್ದ ಅವರ ಪತ್ನಿ ಚೇತನ್ ಕುಲ್ ಮತ್ತು ತಾಯಿ ಅವಂತಿ ಅವರನ್ನು ಚಪ್ಪಲಿ ತೆಗೆದು ಒಳ ಪ್ರವೇಶಿಸುವಂತೆ ಸೂಚಿಸಿದ್ದ ಅಧಿಕಾರಿಗಳು ಮರಳಿ ಬರುವಾಗ ವಿನಂತಿಸಿದರೂ ಅದನ್ನು ವಾಪಸ್ ನೀಡಿದೆ ಅವಮಾನ ಮಾಡಿತ್ತು.
ಮಾನವೀಯ ಲೇಪ ಹಚ್ಚಿದ ಪಾಕ್ ಬಳಿಕ ಜಾದವ್ ತಾಯಿ ಹಾಗೂ ಪತ್ನಿಯೊಂದಿಗೆ ದುಷ್ಟತನ ಹಾಗೂ ದುರ್ನಡತೆಯಿಂದ ವರ್ತಿಸಿದ್ದ ಪಾಕ್ ವಿರುದ್ದ ಟ್ವಿಟರ್ನಲ್ಲಿ ತೀಕ್ಷ್ಣವಾದ ಟೀಕೆಗಳು ವ್ಯಕ್ತವಾಗಿವೆ. #ChappalChorPakistan ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಇದು ಟ್ರೆಂಡ್ ಆಗಿದೆ. ನಮಗೆ ಗೊತ್ತಿಗೆ ನಿಮ್ಮದು ಬಡ ರಾಷ್ಟ್ರವೆಂದು. ಈ ಬೂಟುಗಳನ್ನು ತೆಗೆದುಕೊಂಡು ನಮ್ಮ ದೇಶಪ್ರೇಮಿಯ ಪತ್ನಿಯ ಬೂಟನ್ನು ವಾಪಸ್ ಕೊಡಿ . ಚಪ್ಪಲಿ ಕದ್ದ ಪಾಕಿಸ್ತಾನಕ್ಕೆ ನಾಚಿಕೆ ಇಲ್ಲವೇ ಹೀಗೆ ಹಲವಾರು ತೀಕ್ಷ್ನ ಪ್ರತಿಕ್ರಿಯೆಗಳನ್ನು ಟ್ವೀಟ್ ಮಾಡಿದ್ದಾರೆ.