ಮಂಗಳೂರು, ಸೆ 10 (DaijiworldNews/SM): ನಗರದ ಪಂಪ್ವೆಲ್ ಸಮೀಪ ಬೈಕೊಂದು ಸ್ಕಿಡ್ ಆಗಿ ನಡೆದ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಬಲ್ಲಾಳ್ಬಾಗ್ ವಿವೇಕ್ ನಗರ ನಿವಾಸಿ ನಿಖಿಲ್(21) ಮೃತಪಟ್ಟ ಯುವಕ.
ಇವರ ಜತೆಗಿದ್ದ ಬೈಕ್ ಸವಾರ ಉರ್ವಸ್ಟೋರ್ ನಿವಾಸಿ ಗಣೇಶ್(25) ಅವರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬತ್ 6ರಂದು ರಾತ್ರಿ ನಿಖಿಲ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾದ ತನ್ನ ಸಹೋದರಿಯನ್ನು ನೋಡಲು ಸ್ನೇಹಿತ ಗಣೇಶ್ ಜತೆ ತೆರಳಿದ್ದರು. ವಾಪಸಾಗುವ ಸಂದರ್ಭ ಪಂಪ್ವೆಲ್ ಸಮೀಪ ನಿಯಂತ್ರಣ ಕಳೆದುಕೊಂಡ ಬೈಕ್ ಜಲ್ಲಿ ರಾಶಿಗೆ ಬಿದ್ದಿದೆ. ಇದರಿಂದ ಸಹಸವಾರ ನಿಖಿಲ್ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಗದೆ ಸೆಪ್ಟೆಂಬರ್ 8ರಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ. ನಿಖಿಲ್ ಅವರ ತಂದೆ ಪೌರಕಾರ್ಮಿಕರಾಗಿದ್ದಾರೆ. ಘಟನೆಯ ಕುರಿತಂತೆ ಕಂಕನಾಡಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.