ಮಂಗಳೂರು, ಜು. 26 (DaijiworldNews/AK): ಪಾಲೆಮಾರ್ ಇವೆಂಟ್ಸ್ ಸೊಲ್ಯೂಷನ್ ವತಿಯಿಂದ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ದಾಖಲೆ ಹೊಂದಿರುವ ಖ್ಯಾತ ಮೇಕಪ್ ತಜ್ಞೆ ಡಾ. ದುರ್ಗಾ ವೆಂಕಟೇಶ್ ಅವರ "ಸ್ಟೀಮ್-ಪ್ರೂಫ್, ಡ್ರ್ಯಾಗ್-ಪ್ರೂಫ್" ಪ್ರೊಫೆಷನಲ್ ಮೇಕಪ್ ಮಾಸ್ಟರ್ಕ್ಲಾಸ್ ಜುಲೈ 26ರಂದು ಮಂಗಳೂರಿನ ಪಾಲೆಮಾರ್ ಗಾರ್ಡನ್ನಲ್ಲಿ ನಡೆಯಿತು.


ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಿ, ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮೇಕಪ್ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಗಳಿಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ವೃತ್ತಿ ಪರವಾಗಿ ಬೆಳೆದು ಬರಬೇಕು ಈ ಮೂಲಕ ಜೀವನದಲ್ಲಿ ಯಶಸ್ಸನ್ನ ಗಳಿಸಬೇಕು ಎಂದರಲ್ಲದೆ ಇಂತಹ ಕಾರ್ಯಕ್ರಮ ಇನ್ನಷ್ಟು ಆಯೋಜಿಸಲು ಯೋಜನೆ ರೂಪಿಸಲಾಗುವುದು ಎಂದರು.
ಡಾ. ದುರ್ಗಾ ವೆಂಕಟೇಶ್ ಅವರು ಮಾತನಾಡಿ, ಪ್ರಥಮ ಬಾರಿಗೆ ಮಂಗಳೂರಿಗೆ ಬಂದು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ಎಲ್ಲರೂ ಒಟ್ಟಾಗಿ ಬೆಳೆಯಬೇಕು ಎನ್ನುವ ಸಂಕಲ್ಪ ನನ್ನದಾಗಿದೆ. ಮೇಕಪ್ ಕ್ಷೇತ್ರ ಒಂದು ವೃತ್ತಿಪರ ಕ್ಷೇತ್ರವಾಗಿದ್ದು ಅನುಭವ ಹಂಚಿ ಒಂದಷ್ಟು ಹೆಚ್ಚುತ್ತದೆ ಇದರಿಂದ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ ಎಂದರು.
ಪಾಲೆಮಾರ್ ಇವೆಂಟ್ ಸೊಲ್ಯೂಷನ್ ವತಿಯಿಂದ ಲಾವಣ್ಯ ಹಾಗೂ ರವಿರಾಜ್ ಕಾರ್ಯಕ್ರಮ ಸಂಯೋಜಿಸಿದ್ದರು. 8 ಬಾರಿ ವಿಶ್ವ ದಾಖಲೆ ಹೊಂದಿರುವ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ. ದುರ್ಗಾ ವೆಂಕಟೇಶ್ ಅವರು ಮೇಕಪ್ ತಜ್ಞೆ, ಶಿಕ್ಷಕಿ ಹಾಗೂ ನವೋದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಳೆ, ಬೆವರು, ಆವಿ ಇತ್ಯಾದಿಗಳಿಂದಲೂ ಹಾಳಾಗದ ವೃತ್ತಿಪರ ಮೇಕಪ್ ತಂತ್ರಗಳ ಕುರಿತು ಈ ಮಾಸ್ಟರ್ಕ್ಲಾಸ್ನಲ್ಲಿ ವಿಶೇಷ ತರಬೇತಿ ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ನಾಲ್ನೂರಕ್ಕೂ ಹೆಚ್ಚು ಮಂದಿಗೆ ಒಂದು ದಿನದ ತರಬೇತಿಯನ್ನು ನೀಡಿ ವೃತ್ತಿಪರ ಮೇಕಪ್ ನಲ್ಲಿ ತೊಡಗಿಸಿಕೊಂಡವರ ಅನುಭವವನ್ನು ಹೆಚ್ಚಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.
ಬಳಿಕ ಸಂದೇಹಗಳನ್ನು ನಿವಾರಿಸಿಕೊಳ್ಳಲು ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.