ಉಡುಪಿ, ಸೆ 10 (DaijiworldNews/SM): ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಕುಂದಾಪುರ ಹಾಗೂ ಬೈಂದೂರು ಶಾಸಕರು ಗೈರು ಹಾಜರಾಗಿರುವ ಕುರಿತಂತೆ ಬಂದರು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. 'ಸ್ವಾಭಾವಿಕವಾಗಿ ಹಾಲಾಡಿ ಮತ್ತು ಸುಕುಮಾರ ಶೆಟ್ಟಿ ಬೇರೆ ಕಾರ್ಯನಿಮಿತ್ತ ನಮಗೆ ಮಾಹಿತಿಕೊಟ್ಟು ಹೋಗಿದ್ದಾರೆ. ರಾಜ್ಯಾಧ್ಯಕ್ಷರು ಅನುಮತಿಯನ್ನು ಕೊಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೆ ತೊಂದರೆ ಇಲ್ಲ. ಯಾವುದೆ ಗೊಂದಲವಿಲ್ಲ ಒಟ್ಟಾಗಿದ್ದೇವೆ. ನೆಮ್ಮದಿಯಿಂದ ಆಡಳಿತ ನಡೆಸ್ತಾ ಇದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಮಜಾಯಿಸಿ ನೀಡಿದರು.
ವಿರೋಧ ಪಕ್ಷ ನಾಯಕರು 4-5 ತಿಂಗಳೊಳಗೆ ಬಿಜೆಪಿ ಸರಕಾರ ಬೀಳುತ್ತದೆ ಎನ್ನುವ ಟೀಕೆಗೆ ಉತ್ತರಿಸಿದ ಅವರು, ಯಾರೇ ಆದ್ರೂ ಅಂತ ಸುಂದರವಾದ ಕನಸು ಕಂಡ್ರೆ ಅವರವರ ವಿವೇಚನೆಗೆ ಬಿಟ್ಟು ಬಿಡ್ತೇವೆ. ಆದರೆ ಯಡಿಯೂರಪ್ಪನವರ ನೇತೃತ್ವದ ಸರಕಾರ ಮೂರುವರೆ ವರ್ಷವನ್ನು ಸಫಲವಾಗಿ ಪೂರ್ಣಗೊಳಿಸುತ್ತದೆ ಎಂದರು.
ಸಿದ್ದರಾಮಯ್ಯನವರು ರಾಜ್ಯಾಧ್ಯಕ್ಷ ನಳಿನ್ ಗೆ ವಿದೂಶಕ ಎಂದು ವ್ಯಂಗ್ಯ ಮಾಡಿದ್ದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಅವರು, 'ಸಿದ್ದರಾಮಯ್ಯನವರಿಗೆ ಒಳ್ಳೆಯದೆಲ್ಲ ಕೆಟ್ಟದಾಗಿ ಕಾಣುತ್ತದೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇತರ ಎಲ್ಲಾ ಪಕ್ಷವನ್ನು ಸೋಲಿಸಿ 150 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.