ಮೈಸೂರು ಡಿ 28: ಕೇಂದ್ರದ ಸಚಿವ ಅನಂತ್ಕುಮಾರ್ ಹೆಗ್ಡೆ ಅವರನ್ನ ನಿಂದಿಸುವ ಭರದಲ್ಲಿ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ತನ್ನ ಪೇಸ್ ಬುಕ್ ಖಾತೆಯಲ್ಲಿ ಬರೆದ ವ್ಯಕ್ತಿಯ ವಿರುದ್ದ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೈಸೂರಿನ ಹಾರೋಹಳ್ಳಿ ರವೀಂದ್ರ ಮೈಸೂರು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು ಅನಂತ್ಕುಮಾರ್ ಹೆಗ್ಡೆ ನಿಂದಿಸುವ ಭರದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ. ಈತನು ಪ್ರೊ. ಮಹೇಶ್ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿದ್ದಾನೆ. ಅತ್ಯಂತ ಅಸಹ್ಯ ಪದಗಳನ್ನು ಬಳಸಿ ಹಿಂದೂ ದೇವರುಗಳ ಬಗ್ಗೆ ನಿಂದಿಸಿದ್ದು ಈತನ ಪೋಸ್ಟ್ ಗೆ ಆಕ್ರೋಶ ಭರಿತ ಕಾಮೆಂಟ್ಗಳು ಬಂದಿದ್ದು, ಫೇಸ್ಬುಕ್ನಲ್ಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸೀತೆಗೂ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು ಇವರ ಮಕ್ಕಳೇ ಲವಕುಶ. ಸೀತೆಗೆ ರಾವಣನ ಜೊತೆಗೂ ಅನೈತಿಕ ಸಂಬಂಧವಿತ್ತು. ಹೀಗೆ ಅಗ್ನಿದೇವ, ಕೃಷ್ಣ, ರಾಮ, ಲಕ್ಷ್ಮಣ, ಸೀತೆ , ಗಣೇಶ, ಸುಬ್ರಮಣ್ಯ, ಶಿವ ಪಾರ್ವತಿ ಹೀಗೆ ಎಲ್ಲಾ ದೇವರ ಬಗ್ಗೆಯೂ ಅಶ್ಲೀಲವಾಗಿ ಬರೆದಿದ್ದು ಮೈಸೂರಿನ ಸಮಗ್ರ ರಕ್ಷಣಾ ವೇದಿಕೆಯೂ ಇತನ ವಿರುದ್ದ ಡಿಸಿಪಿ ವಿಷ್ಣುವರ್ಧನ ದೂರು ನೀಡಿದ್ದಾರೆ.