ಮಂಗಳೂರು, ಸೆ 11 (Daijiworld News/MSP): ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಯುವಕನೋರ್ವ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೆ. 11 ರ ಬುಧವಾರ ಬೆಳಗ್ಗೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಉರ್ವ ನಿವಾಸಿ ಸದಾಶಿವ ಎಂದು ತಿಳಿದುಬಂದಿದೆ. ಈತ ನದಿಗೆ ಹಾರುವ ಮುನ್ನ ಬೈಕ್'ನ್ನು ಸೇತುವೆ ಬಳಿಯೇ ನಿಲ್ಲಿಸಿ ಪತ್ರ ಬರೆದಿಟ್ಟು ನದಿಗೆ ಹಾರಿದ್ದಾರೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಈಗಾಗಲೇ ಯುವಕನ ಕುಟುಂಬಸಸ್ಥರು ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.