ಬಂಟ್ವಾಳ, ಸೆ 11 (DaijiworldNews/SM): ತಾಲೂಕಿನ ಪಿಲಾತಬೆಟ್ಟು ಗ್ರಾಮದ ಬೆಂಚಿನಡುಕ ಎಂಬಲ್ಲಿ ಮನೆಯಿಂದ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಬೆಂಚಿನಡುಕ ಪಿಲಾತಬೆಟ್ಟು ನಿವಾಸಿ ಏಂಜಲಿನ್ ಮಸ್ಕರೇನಸ್ ಎಂಬವರ ಮನೆಯಿಂದ ಕಳ್ಳತನ ನಡೆದಿದೆ.
ಮನೆ ಮಂದಿ ಯಾರೂ ಇಲ್ಲದ ಸಂದರ್ಭ ಕಳ್ಳರು ಮನೆಯ ಸಿಟ್ ಔಟ್ ನ ಹೂ ಕುಂಡದಲ್ಲಿ ಇಟ್ಟಿದ್ದ ಕೀಯಿಂದ ಮನೆಯ ಬಾಗಿಲನ್ನು ತೆರೆದು ಮನೆಯೊಳಗೆ ನುಗ್ಗಿದ್ದಾರೆ. ಹಾಗೂ ಬೆಡ್ ರೂಮ್ ನಲ್ಲಿದ್ದ ಕಪಾಟಿನಿಂದ ಸುಮಾರು 30 ಗ್ರಾಂ ತೂಕದ ಎರಡೆಳೆಯ ಚಿನ್ನದ ಕರಿಮಣಿ ಸರ ಸುಮಾರು 11 ಗ್ರಾಂ ತೂಕದ ನೆಕ್ಲೇಸ್ ಮತ್ತು ಸುಮಾರು 2 ಗ್ರಾಂ ತೂಕದ ಚಿನ್ನದ ಉಂಗುರ, ಕಪಾಟಿನಲ್ಲಿದ್ದ ಸುಮಾರು 8 ಗ್ರಾಂ ತೂಕದ ಒಂದು ಜೊತೆ ಬೆಂಡೋಲೆಯನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನದ ಒಡವೆಗಳ ಒಟ್ಟು ಮೌಲ್ಯ ಒಂದೂವರೆ ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನು ಈ ಕುಟುಂಬದ ಬಗ್ಗೆ ಚೆನ್ನಾಗಿ ತಿಳಿದುಇರುವವರೇ ಕಳ್ಳತನ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.