ಬಂಟ್ವಾಳ ಡಿ 28 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಮಾತೃ ಪೂರ್ಣ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಬಿ.ಸಿರೋಡಿನ ತಾ.ಪಂ.ನ ಎಸ್.ಜಿ.ಅರ್.ಎಸ್.ವೈ.ಸಭಾಂಗಣದಲ್ಲಿ ಡಿ 28 ರ ಗುರುವಾರ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮಾತ್ರ ಪೂರ್ಣ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ದ.ಕ.ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡಿದೆ ಮುಂದಿನ ದಿನಗಳಲ್ಲಿ ಯಶಸ್ವಿ ಮಾಡಲು ಇಲಾಖೆ ಯವರು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದರು. ಈ ಸಭೆಯಲ್ಲಿ ಅಂಗನವಾಡಿ ಇಲಾಖೆ ಯವರು ನೀಡಿದ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಪರಿಣಾಮವಾಗಿ ಕಾರ್ಯ ಗತವಾಗಲು ಬೇಕಾದ ಅವಶ್ಯಕತೆ ಗಳನ್ನು ಒದಗಿಸುವುದು ಮತ್ತು ಸಮಸ್ಯೆ ಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ಅಂಗನವಾಡಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಮಾತ್ರ ಪೂರ್ಣ ಯೋಜನೆಯ ಅನುಷ್ಟಾನದಲ್ಲಿ ಪ್ರಗತಿ ಕುಂಠಿತವಾಗಲು ಕ್ಷೇತ್ರ ಮಟ್ಟದಲ್ಲಿ ಕಂಡು ಬರುವ ನ್ಯೂನತೆಗಳನ್ನು ಸಚಿವರ ಗಮನಕ್ಕೆ ತಂದರು.