ಬೆಂಗಳೂರು, ಸೆ.14: ಹಿರಿಯ ಪತ್ರಕರ್ತೆ, ಖ್ಯಾತ ಸಾಹಿತಿ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ ವಾರಗಳು ಕಳೆದ್ರೂ ಹಂತಕರ ನಿಖರ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖಾ ತಂಡ 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಆದರೆ ತನಿಖೆಯಿಂದ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ವಿಪರ್ಯಾಸ ಅಂದ್ರೆ, ಇದೀಗ ಗೌರಿ ಲಂಕೇಶ್ ಅವರ ಮನೆಯ ಬಳಿ ಪೊದೆಯೊಂದರಲ್ಲಿ ಹಳೆಯ ಮೊಬೈಲ್ ಪತ್ತೆಯಾಗಿದೆ.
ಗೌರಿ ಲಂಕೇಶ್ ಅವರ ಮನೆಯ ಬಳಿ ಸಿಕ್ಕಿರುವ ಈ ಮೊಬೈಲ್ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ತನಿಖಾ ತಂಡಕ್ಕೆ ಸಿಕ್ಕಿರುವ ಈ ಮೊಬೈಲ್ ಯಾರದ್ದು ಅನ್ನುವುದು ಗೊತ್ತಾಗಿಲ್ಲ. ಸಿಮ್ ಇಲ್ಲದ ಮೊಬೈಲ್ ಇದಾಗಿದ್ದು, ತನಿಖಾ ನಂತರವೇ ನಿಖರ ಮಾಹಿತಿ ಹೊರಬರಲಿದೆ. ತನಿಖಾ ತಂಡಕ್ಕೆ ದೊರಕಿರುವ ಈ ಮೊಬೈಲ್ ನಿಂದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಹಂತಕರ ಸುಳಿವು ಸಿಗಲಿದೆಯಾ ಅನ್ನೋದನ್ನು ಕಾದು ನೋಡಬೇಕಿದೆ.