ಉಳ್ಳಾಲ, ಸೆ. 06 (DaijiworldNews/TA): ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಂದರು ಮತ್ತು ಉಳ್ಳಾಲ ಠಾಣೆಯ ಪೊಲೀಸರು ನಗರದ ಕಂಡತ್ಪಳ್ಳಿ ನಿವಾಸಿ ಸೈಫುಲ್ಲಾ (23) ಮತ್ತು ಕೋಟೆಕಾರು ಕುಂಪಲ ನಿವಾಸಿ ಸಂದೇಶ್ (34) ಎಂಬವರನ್ನು ಬಂಧಿಸಿದ್ದಾರೆ.

ಸೆ.4ರಂದು ಕಂಡತ್ ಪಳ್ಳಿ ಬಳಿ ಸೈಫುಲ್ಲಾ ಮತ್ತು ಕುಂಪಲದ ಮೂರುಕಟ್ಟೆ ಪರಿಸರದಲ್ಲಿ ಸಂದೇಶ್ನನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.