ಸುಳ್ಯ, ಸೆ. 06 (DaijiworldNews/AA): ಪತ್ನಿ ಹಾಗೂ ಅತ್ತೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಆರೋಪಿಯು ಇಲಿಪಾಷಾಣ ಸೇವಿಸಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರು ಎಂಬಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸೆ. 6 ರಂದು ಮಧ್ಯಾಹ್ನ ಸಮಯ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಮುಕ್ಕೂರು ನಿವಾಸಿ ಗಣೇಶ (38) ಎಂಬಾತನು ಆತನ ಪತ್ನಿ ವಿನಿತಾ (32) ಹಾಗೂ ಆಕೆಯ ತಾಯಿ ಕುಸುಮಾ(50) ಎಂಬವರಿಗೆ ಯಾವುದೋ ಹರಿತವಾದ ಸಾಧನದಿಂದ ಹಲ್ಲೆ ನಡೆಸಿ ರಕ್ತಗಾಯಗೊಳಿಸಿರುತ್ತಾನೆ.
ಗಾಯಗೊಂಡ ವಿನಿತಾ ಹಾಗೂ ಕುಸುಮಾ ರವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ರ್ತಚಿಕಿತ್ಸೆಗೆ ಒಳಗಾಗಿರುತ್ತಾರೆ. ಇನ್ನು ಆರೋಪಿಯು ಇಲಿಪಾಷಾಣ ಸೇವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.
ಈ ಫಟನೆಯ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.